Visit Channel

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ

WhatsApp Image 2020-06-12 at 10.33.54

ಆಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ ಸರಳವಾಗಿ ದಾಂಪತ್ಯ ಜೀವನಕ್ಕೆ ಇಂದು ಕಾಲಿಟ್ಟಿದ್ದಾರೆ.   ಬೆಂಗಳೂರಿನ ಜೆ.ಪಿ ನಗರದ  ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ ೨.೩೦ ರಿಂದ ೩ ಗಂಟೆಯ  ಬ್ರಾಹ್ಮಿ ಮೂಹರ್ತದಲ್ಲಿ  ತಮ್ಮ ಬಾಲ್ಯದ ಗೆಳೆಯ  ಅರುಣ್ ಮಯೂರಿ ಕುತ್ತಿಗೆಗೆ ತಾಳಿಕಟ್ಟಿದ್ದಾರೆ.

ಮಯೂರಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು  ತಮ್ಮ ಕಷ್ಟದ ಕಾಲದಲ್ಲೂ ಜೊತೆಗಿದ್ದ ಗೆಳೆಯನನ್ನೇ ವರಿಸಿದ್ದಾರೆ. ಅಂದಹಾಗೆ ಅರುಣ್  ಯುಎಸ್ಎನಲ್ಲಿ  ಸೆಟಲ್ ಆಗಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ  ಕಂಪನಿಯೊಂದರಲ್ಲಿ  ಕೆಲಸ ಮಾಡುತ್ತಿದ್ದಾರೆ.ಮಯೂರಿ ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದು ನಂತರದ ದಿನಗಳಲ್ಲಿ ಬೆಳ್ಳಿತೆರೆಗೂ  ಕಾಲಿಟ್ಟ ಇವರು  ಕೃಷ್ಣ ಲೀಲಾ  ಇಷ್ಟಕಾಮ್ಯ , ರುಸ್ತುಂ ಆಟಕ್ಕುಂಟು, ಲೆಕ್ಕಕ್ಕಿಲ್ಲ , ಪೊಗರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.. ಇನ್ನು ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿರೋ ಇವರ ಜೀವನ ಸುಖಕರವಾಗಿರಲಿ ಅನ್ನೋದೆ ನಮ್ಮ ಆಶಯ

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.