Visit Channel

ನಿರಾಶ್ರಿತರ ಮನೆಗಳ ಮಂಜೂರಾತಿಯಲ್ಲಿ ಗೋಲ್ ಮಾಲ್…ಫಲಾನುಭವಿಗಳಿಗೆ ಧೋಖಾ…ಉಳ್ಳವರಿಗೇ ಮನೆ ಮಂಜೂರು…

People

ಹೆಚ್.ಡಿ.ಕೋಟೆ : ಮಳೆ ಹಾನಿ ನಿರಾಶ್ರಿತರಿಗೆ ತಲುಪಬೇಕಾದ ವಾಸದ ಮನೆಗಳ ಮಂಜೂರಾತಿಯಲ್ಲಿ ಭಾರಿ ಗೋಲ್ ಮಾಲ್ ನಡೆದಿರುವ ಪ್ರಕರಣ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಬೆಳಕಿಗೆ ಬಂದಿದೆ.ಅರ್ಹ ಫಲಾನುಭವಿಗಳಿಗೆ ಮಂಜೂರಾಗಬೇಕಿದ್ದ ಮನೆ ಉಳ್ಳವರ ಪಾಲಾಗಿದೆ.ಒಂದೇ ವ್ಯಕ್ತಿ ಮೂರು ಮನೆಗಳನ್ನ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಿಡಿಒ ಭಾಗ್ಯಮ್ಮ ಮತ್ತು ಗ್ರಾಮ ಲೆಕ್ಕಾಧಿಕಾರಿ ಸತೀಶ್ ಹಾಗೂ ರಾಜಸ್ವ ನಿರೀಕ್ಷಕರು ಮಹೇಶ್ ನೀಡಿದ ಧೋಖಾ ವರದಿಯಿಂದ ನಿಜವಾದ ಫಲಾನುಭವಿಗಳಿಗೆ ಮೋಸ ಆಗಿದೆ.
ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಹನುಮಂತರಾಜು ಮತ್ತು ವಸತಿ ವಿತರಣೆ ಸಮನ್ವಯಾಧಿಕಾರಿ ಪ್ರಕಾಶ್ ರವರ ಪರಿಶೀಲನೆಯ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.ಭೂಪನೊಬ್ಬ ಮೂರು ಮನೆಗಳನ್ನು ಒಬ್ಬನೇ ಪಡೆದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.ಅರ್ಹ ಫಲಾನುಭವಿಗೆ ಮಂಜೂರಾಗದ ಹಿನ್ನಲೆ ಸ್ಥಳೀಯರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.
ಪ್ರವಾಹದ ಸಂದರ್ಭದಲ್ಲಿ ಸರ್ವೆ ಮಾಡಿದ ಅಧಿಕಾರಿಗಳು ತಪ್ಪು ವರದಿ ಕೊಟ್ಟಿದ್ದಾರೆಂದು ಆರೋಪಿಸಲಾಗಿದೆ. ಘಟನೆಯಿಂದ ಗ್ರಾಮದಲ್ಲಿ ಅಸಮಾಧಾನ ಭುಗಿಲೆದ್ದಿದೆ.ಅರ್ಹ ಫಲಾನುಭವಿಗಳು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.ವಾಸದ ಮನೆಗಳನ್ನು ಕೆಡವಿ ಬಡ ಜನರಿಗೆ ಮತ್ತು ನಿಜವಾದ ಫಲಾನುಭವಿಗಳಿಗೆ ಮೋಸ ಮಾಡಿದ್ದಾರೆಂದು ಆರೋಪಿಸಲಾಗಿದೆ.ಹಿರೇಹಳ್ಳಿ ಬಿ ಕಾಲೋನಿ ಗ್ರಾಮದ ಜಗಧಾಂಭ ರವರು 2019-20 ನೇ ಸಾಲಿನಲ್ಲಿ ಫಲಾನುಭವಿ ಕೋಡ್ ಸಂಖ್ಯೆ- 927647 ಅಲ್ಲಿ ಮನೆ ಹಾನಿಯಾಗಿದೆ ಎಂದು ನೆರೆ ಸಂತ್ರಸ್ತರ ಪರಿಹಾರ ನಿಧಿಯಿಂದ 50000 ರೂ ಪಡೆದುಕೊಂಡಿದ್ದಾರೆ.ಇದೆ ಮನೆಗೆ 2021-22 ನೇ ಸಾಲಿನಲ್ಲಿ ಮಳೆಗೆ ಮನೆ ಹಾನಿಯಾಗಿದೆ ಎಂದು ಫಲಾನುಭವಿ ಕೋಡ್ ಸಂಖ್ಯೆ :938637 ರಲ್ಲಿ 3 ಲಕ್ಷ ರೂ ಪರಿಹಾರಕ್ಕೆ ಫಲಾನುಭವಿ ಆಗಿದ್ದಾರೆ.
ಈ ಡಿಮ್ಯಾಂಡ್ ಗೆ ಸಂಬಂಧಿಸಿದಂತೆ ಜಗಧಾಂಭ , ಚೈತ್ರ ಇವರ ಅತ್ತೆ ನಾಗಮ್ಮ ಹೆಸರಿಗೆ ಗ್ರಾಮ ಪಂಚಾಯಿತಿಯ ಪಿ ಎಮ್ ವೈ ಯೋಜನೆಯಾಡಿ ಫಲಾನುಭವಿ ಕೋಡ್ ಸಂಖ್ಯೆ:528208 ಮನೆ ಮಂಜೂರು ಆಗಿದೆ. ಇದೇ ಗ್ರಾಮದ ಪದ್ಮಾ ಕೋ೦ ಪುಟ್ಟಸ್ವಾಮಿರವರು ಗ್ರಾಮ ಪಂಚಾಯಿತಿ ಬಸವ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಸಂಖ್ಯೆ :767367 ರಲ್ಲಿ 131800 ರೂ ಅನುದಾನಕ್ಕೆ ಫಲಾನುಭವಿಗಳಾಗಿದ್ದಾರೆ ಮತ್ತೆ ಇದೇ ವ್ಯಕ್ತಿಗೆ 2019-20 ನೇ ಸಾಲಿನಲ್ಲೂ 50 ಸಾವಿರ ಪಡೆದಿರುತ್ತಾರೆ ಇದೆ ವ್ಯಕ್ತಿಗೆ ಮೂರನೇ ಬಾರಿಯೂ ಕೂಡ 5ಲಕ್ಷ 2020 -21ನೇ ಸಾಲಿನಲ್ಲಿ ಆಯ್ಕೆಯಾಗಿರುತ್ತಾರೆ. ಈ ಕೂಡಲೇ ತಪ್ಪುಗಳನ್ನ ಸರಪಡಿಸಿ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ…

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.