ನಿಷೇಧಿತ ಪಬ್​ ಜಿ ಗೇಮ್​ ಶೀಘ್ರ ವಾಪಸ್​…ಕಾರಣ ಏನು?

ದೆಹಲಿ: ನಿಷೇಧಿತ ಪಬ್​ ಜಿ ಗೇಮ್​ ಶೀಘ್ರ ವಾಪಸ್​ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಚೀನೀ ಪಾಲುದಾರಿಕೆ ಇದೆ ಎಂಬ ಕಾರಣಕ್ಕೆ ಭಾರತ ಸರ್ಕಾರವು ಇತ್ತೀಚೆಗೆ 117 ಆ್ಯಪ್​ಗಳನ್ನು ಬ್ಯಾನ್​ ಮಾಡಿತ್ತು. ಈ ಪೈಕಿ ಜನಪ್ರಿಯ ಪಬ್​ಜಿ ಗೇಮ್​ ಸಹ ಸೇರ್ಪಡೆಯಾಗಿತ್ತು.

ಈ ಆ್ಯಪ್​ ಬ್ಯಾನ್​ ಆಗಿದ್ದರಿಂದ ಕೋಟ್ಯಂತರ ಅಭಿಮಾನಿಗಳು ಆ್ಯಪ್​ಅನ್ನು ವಾಪಸ್ ತರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಕ್ಕೊತ್ತಾಯ ವ್ಯಕ್ತಪಡಿಸಿದ್ದರು.

ಚೀನಾ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಟೆನ್ಸೆಂಟ್​ ಎನ್ನುವ ಕಂಪನಿ ನಡೆಸುತ್ತಿದ್ದವು. ಇದು ಪಬ್​ ಜಿ ಗೇಮ್​ನ ಪೋಷಕ ಸಂಸ್ಥೆಯಾಗಿದೆ. ಇದರ ಮುಖ್ಯ ಪಾಲುದಾರಿಕೆಯು ದಕ್ಷಿಣ ಕೊರಿಯಾ ಹೊಂದಿತ್ತು. ಇದೀಗ ಟೆನ್ಸೆಂಟ್​ ಕಂಪನಿಯ ಸಂಪೂರ್ಣ ಪಾಲುದಾರಿಕೆಯನ್ನು ಚೀನಾ, ದಕ್ಷಿಣ ಕೊರಿಯಾಗೆ ಬಿಟ್ಟುಕೊಟ್ಟಿದೆ.

ಇದರಿಂದಾಗಿ ಟೆನ್ಸೆಂಟ್​ ಕಂಪನಿಯ ಮಾಲೀಕತ್ವವನ್ನು ದಕ್ಷಿಣ ಕೊರಿಯಾ ಹೊಂದಲಿದ್ದು, ಚೀನಾ ಕಂಪನಿ ಎನ್ನುವ ಕಪ್ಪು ಪಟ್ಟಿಯಿಂದ ಹೊರಬರಲಿದೆ. ಹಾಗಾಗಿ ಪಬ್ಜಿ ಗೇಮ್​ ಸದ್ಯದಲ್ಲೇ ನಿಷೇಧದ ಸಂಕೋಲೆಯಿಂದ ಹೊರಬರಲಿದೆ.

Exit mobile version