ಗುಜರಾತ್: ಗುಜರಾತ್ ನ ಜಯದೀಪ್ ಗೋಹಿಲ್ ಎಂಬವರು ಇಂಟರ್ನೆಟ್ ನಲ್ಲಿ ಇದೀಗ ಭಾರೀ ಸದ್ದು ಮಾಡುತ್ತಿದ್ದಾರೆ. ‘ಇಂಡಿಯಾವಾಲೆ’ ಹಾಡಿಗೆ ನೃತ್ಯ ಮಾಡುತ್ತಾ ಸಖತ್ ಸ್ಟೆಪ್ ಗಳನ್ನು ಗೋಹಿಲ್ ಅವರು ಹಾಕಿದ್ದಾರೆ.
ಇದರಲ್ಲೇನಿದೆ ವಿಶೇಷ ಅಂತಿರಾ, ಇವರು ಡಾನ್ಸ್ ಮಾಡಿರೋದು ನೆಲದ ಮೇಲಲ್ಲ, ನೀರಿನಾಳದಲ್ಲಿ. ಸ್ವಿಮಿಂಗ್ ಗಾಗಲ್ಸ್ ಧರಿಸಿ ಹ್ಯಾಪಿ ನ್ಯೂ ಇಯರ್ ಚಿತ್ತದ ಹಾಡುಗಳಿಗೆ ಸ್ಟೆಪ್ ಹಾಕಿದ ಇವರು ನೀರಿನಾಳದಲ್ಲಿ ಬ್ಯಾಕ್ ಹಿಪ್ ಗಳನ್ನೂ ಮಾಡುವ ಮೂಲಕ ಬಹಳ ಅದ್ಧೂರಿಯಾಗಿ ಕಾಣಿಸಿಕೊಂಡಿದ್ದಾರೆ.
ಗೋಹಿಲ್ ಅವರು ಇನ್ಸ್ಟಾಗ್ರಾಮ್ ನಲ್ಲಿ’ ಹೈಡ್ರೋಮ್ಯಾನ್’ ಎಂದೇ ಖ್ಯಾತರಾಗಿದ್ದಾರೆ. ಇವರು ಭಾರತದ ಮೊದಲ ಅಂಡರ್ ವಾಟರ್ ಡಾನ್ಸರ್ ಎಂದೂ ಖ್ಯಾತರಾಗಿದ್ದಾರೆ.