ಪೆಟ್ರೋಲ್, ಡೀಸೆಲ್ ದರಗಳು ಸತತ ನಾಲ್ಕನೇ ದಿನವಾದ ಗುರುವಾರವೂ ಏರಿಕೆಯಾಗಿದ್ದು ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್ ಲೀಟರ್‌ಗೆ 44 ಪೈಸೆ ಹೆಚ್ಚಳವಾದರೆ, ಡೀಸೆಲ್ ದರವು 58 ಪೈಸೆ ಏರಿ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಗಿ ಕಚ್ಚಾ ತೈಲ ದರ ಏರಿಕೆಯೆ ಪೆಟ್ರೋಲ್ ಡಿಸೇಲ್ ದರ ಏರಿಕೆಗೆ ಕಾರಣ ಅನ್ನೋದು ತಿಳಿದಿದೆ.ಕೊರೊನಾ ಸಂಕಷ್ಟದ ಸಮಯದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದ್ದು ಪೆಟ್ರೋಲ್, ಡಿಸೇಲ್ ದರದಲ್ಲಿ ದಿನ ನಿತ್ಯ ಏರಿಕಎಯಾಗುತ್ತಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಬೆಂಗಳೂರಿನಲ್ಲಿ 44 ಪೈಸೆ ಏರಿಕೆ ಕಾಣುವ ಮೂಲಕ ಪೆಟ್ರೋಲ್ ಪ್ರತೀ ಲೀಟರ್‌ಗೆ 75.77 ರೂ ಆಗಿದೆ. ಇನ್ನು 58 ಪೈಸೆ ಏರಿಕೆ ಕಾಣುವ ಮೂಲಕ ಡಿಸೇಲ್ ದರ ಪ್ರತೀ ಲೀಟರ್ ದರ 68.09 ರೂ. ಆಗಿದೆ.
ಅದರಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್‌ಗೆ 74.00 ರೂ. ಇದ್ದರೆ, ಡಿಸೇಲ್ ದರ 71.62 ರೂ. ಇದೆ.ಆದ್ರೆ ಈ ಎರಡು ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಡಿಸೇಲ್ ದರದಲ್ಲಿ ಭಾರೀ ವತ್ಯಯವಿದೆ. ಬೆಂಗಳೂರಿನಲ್ಲಿ ಡಿಸೇಲ್ ದರ ಕಡಿಮೆ ಇದೆ.ಇನ್ನು ಕಚ್ಚಾತೈಲದ ದರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಇದೆ ಈ ಕಾರಣದಿಂದಾಗಿ ಮಾ.14ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ 3 ರೂ. ಅಬಕಾರಿ ಸುಂಕವನ್ನು ಹಾಕಿತ್ತು. ಮತ್ತೆ ಮೇ 6ರಂದು ಪೆಟ್ರೋಲ್ ಮೇಲೆ 10 ರೂ. ಮತ್ತು ಡೀಸೆಲ್ ಮೇಲೆ 13 ರೂ. ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ವಿಧಿಸಿತ್ತು.