download app

FOLLOW US ON >

Monday, August 8, 2022
Breaking News
ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!ಸಿಎಂಗೆ ಕೋವಿಡ್ ಪಾಸಿಟಿವ್ ದೃಢ ; ದೆಹಲಿ ಪ್ರವಾಸ ರದ್ದು!ಜಮೀರ್‌ ಅಹಮದ್‌ ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ : ಬಿಜೆಪಿಜಮ್ಮು- ಕಾಶ್ಮೀರದಲ್ಲಿ ಪತ್ತೆಯಾಗಿದೆ 1,200 ವರ್ಷಗಳ ಹಿಂದಿನ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ!
English English Kannada Kannada

ಬಿಎಸ್‍ವೈ ಘೋಷಿಸಿದ 1610 ಕೋಟಿ ಪ್ಯಾಕೇಜ್‍ನಲ್ಲಿ ಏನಿದೆ?

ಕಿಲ್ಲರ್ ವೈರಸ್ ಕೊರೋನಾ ಸೋಂಕು ವಿಶ್ವದೆಲ್ಲೆಡೆ ಹರಡಿದ್ದು ಭಾರತ ಸೇರಿದಂತೆ ಬಹುತೇಕ ಹಲವು ರಾಷ್ಟ್ರಗಳು ಕಳೆದ 1 ವರೆ ತಿಂಗಳಿನಿಂದ ಲಾಕ್‍ಡೌನ್ ಆಗಿದ್ದು ಎಲ್ಲಾ ಕೆಲಸ ಕಾರ್ಯಗಳು ಶಟ್‍ಡೌನ್ ಆಗಿದೆ. ಪರಿಣಾಮ ಜನರಿಗೆ ಕೆಲಸವಿಲ್ಲದೆ ನಿರ್ಗತಿಕರಾಗಿದ್ದಾರೆ ಶ್ರೀಮಂತರಲ್ಲಿ ಹಣವಿದ್ದು ಅವರು ಜೀವನ ಸಾಗಿಸ್ತಾ ಇದ್ರೆ ಬಡವರಿಗೆ ಹಲವು ಸಂಘಸಂಸ್ಥೆಗಳು ದಿನಸಿಗಳನ್ನು ನೀಡಿ ಸಹಾಯ ಮಾಡುತ್ತಿದೆ. ಆದ್ರೆ ಮಧ್ಯಮವರ್ಗದ ಜನರು ತೀರಾ ನೋವು ಅನುಭವಿಸುತ್ತಿದ್ದಾರೆ.

ಈ ಹಿನ್ನಲೆ ಇದೀಗ ರಾಜ್ಯ ಸರ್ಕಾರದಿಂದ ಬಡವರಿಗೆ ಹಾಗೂ ಮಧ್ಯಮವರ್ಗದವರಿಗೆ ಬಂಪರ್ ಬಹುಮಾನವನ್ನು ಸಿ.ಎಂ ಯಡಿಯೂರಪ್ಪ ಘೋಷಿಸಿದ್ದಾರೆ.ದುಡಿಮೆ ಇಲ್ಲದೆ ನಷ್ಟದ ಹಾದಿಯಲ್ಲಿರೊ ಜನರ ಕೈ ಹಿಡಿದಿದ್ದಾರೆ ಸಿ.ಎಂ ಬಿಎಸ್ ವೈ. ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಬಿಎಸ್‍ವೈ ರಾಜ್ಯದಲ್ಲಿ ಸ್ಥಗಿತಗೊಂಡಿರುವ ಆರ್ಥಿಕತೆಗೆ ಮತ್ತೆ ಉತ್ತೇಜನ ನೀಡುವ ಹಾಗೂ ಕಷ್ಟದಲ್ಲಿರುವ ಎಲ್ಲರಿಗೂ ಪರಿಹಾರ ನೀಡುವ ಉದ್ದೇಶದಿಂದ ರಾಜ್ಯಕ್ಕೆ 1610 ಕೋಟಿಯ ವಿಶೇಷ ಪ್ಯಾಕೇಜನ್ನು ಘೋಷಣೆ ಮಾಡಿದ್ದಾರೆ.

ಇನ್ನು ಯಾವ ರೀತಿ ಪ್ಯಾಕೇಜನ್ನು ವಿಂಗಡಿಸಿದ್ದಾರೆ ಅನ್ನೋದನ್ನು ಗಮನಿಸುದಾದ್ರೆ-
1.ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ 2 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲು ಘೋಷಣೆ.
2.ಶೇ. 1ರಷ್ಟು ಗ್ರಾಹಕರ ವಿದ್ಯುತ್ ಬಿಲ್ ಕಡಿತ
3.ತಲಾ 5000 ಹಣವನ್ನು 7.75 ಲಕ್ಷ ಆಟೋ, ಟ್ಯಾಕ್ಸಿ ಹಾಗೂ 60000 ಅಗಸರ ಬ್ಯಾಂಕ್ ಖಾತೆಗೆ ಜಮಾವಣೆ
4.ಕೌರಿಕ ವರ್ಗದವರಿಗೆ 5000 ರೂ ಆರ್ಥಿಕ ನೆರವು
5.ರಾಜ್ಯದಲ್ಲಿ ನೋಂದಾಯಿಸಿಕೊಂಡ 18 ಲಕ್ಷ ಕಟ್ಟಡ ಕಾರ್ಮಿಕರ ಖಾತೆ 2ಸಾವಿರವಲ್ಲದೆ ಹೆಚ್ಚುವರಿ 2000 ರೂ ಜಮೆ
6.ಉದ್ಯಮದ ಹೆಚ್ಚಳಕ್ಕಾಗಿ ನೇಕಾರರಿಗೆ , ನೇಕಾರ ಸಮ್ಮಾನ್ ಯೋಜನೆ ಮೂಲಕ 80 ಕೋಟಿ ರೂ ಬಿಡುಗಡೆ.. 1 ಲಕ್ಷ ವರೆಗಿನ ಸಾಲ ಮನ್ನ

7.ಹೂ ಬೆಳೆಗಾರರಿಗೆ ಎಕರೆಗೆ ತಲಾ 25,000 ಪರಿಹಾರ ನೆರವು ಘೋಷಣೆ ಹಾಗೂ ಇದರ ಜೊತೆ ತರಕಾರಿ ಮತ್ತು ಹಣ್ಣು ಬೆಳೆಗಾರರರಿಗೆ ನೆರವು ಸಿಗೋ ಸಾಧ್ಯತೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article