ಪ್ರಪಂಚಾದ್ಯಂತ ಕೊರೋನ ಮಹಾಮಾರಿಯು ದಿನದಂದ ದಿನ ಹೆಚ್ಚುತ್ತಲೇ ಇದೆ. ಶನಿವಾರದಂದು ಚೀನದ ಬೀಜ್ಂಗ್ ಮತ್ತೊಮ್ಮೆ ಲಾಕ್ಢೌನ್ ಆಗಿದೆ.
ಎರಡು ತಿಂಗಳ ನಂತರ ಗುರುವಾರದಂದು ಬೀಜಿಂಗ್ ನಲ್ಲಿ ಮೊದಲ ಕೊರೋನ ಪ್ರಕರಣ ದಾಖಲಾಗಿತ್ತು. ಸೋಂಕಿತನು ಹತ್ತಿರದ ಮಾಂಸ ಮಾರುಕಟ್ಟೆಗೆ ಭೇಟಿ ಮಾಡಿದ್ದರಿಂದ ಲಾಕ್ಢೌನ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಹತ್ತಿರದ ಎಲ್ಲಾ ಶಾಲೆಗಳು ಹಾಗು ಮನರಂಜನಾ ಕಾರ್ಯಕ್ರಮಗಳನ್ನು ಸ್ಥಗಿತಹೊಂಡಿವೆ. ಶನಿವಾರ ದಾಖಲಾದ 6 ಕೇಸ್ ಗಳಲ್ಲಿ 3 ಕೇಸ್ ಗಳು ಮೊದಲ ಸೋಂಕಿತ ಭೇಟಿ ನೀಡಿದ ಸಿಂಫಡಿ ಮಾರುಕಟ್ಟೆಯಿಂದ ಕಂಡು ಬಂದಿದೆ.
ಭಾರತದಲ್ಲಿ ಒಂದೇ ದಿನ 11,458 ಕೊರೋನ ಸೋಂಕು ಪತ್ತೆ:
ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಕೊರೋನ ಪ್ರಕರಣಗಳು ಪತ್ತೆಯಾಗಿ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ. ಒಂದೇ ದಿನದಲ್ಲಿ 11,458 ಹೊಸ ಪ್ರಕರಣಗಳು ದಾಖಲಾಗಿ 3,08,993 ಕ್ಕೆ ದಿಢೀರ್ ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗೆಯಿಂದ 24 ಗಂಟೆಯಲ್ಲಿ 386 ಮಂದಿ ಕೊರೋನದಿಂದ ಮೃತಪಟ್ಟಿದ್ದಾರೆ. ಈ ವರೆಗೂ ದೇಶದಲ್ಲಿ ಒಟ್ಟೂ 1,51,231 ಮಂದಿ ಚೇತರಿಸಿಕೊಂಡಿದ್ದು 8,890 ಮಂದಿ ಸಾವುಗೀಡಾಗಿದ್ದಾರೆ.
ಜೂನ್ 16 ಹಾಗೂ 17 ರಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯದ ಮುಖ್ಯ ಮಂತ್ರಿಗಳ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ.