ಬೀಟ್ ರೂಟ್ ಎಂದರೆ ಕೆಲವರು ಮೂಗು ಮುರಿಯುತ್ತಾರೆ. ಕಾರಣ ಅದು ರಕ್ತದಂತೆ ಕೆಂಪು ಬಣ್ಣವನ್ನು ಹೊಂದಿರುವುದಕ್ಕೆ ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ ಇದರ ಆರೋಗ್ಯ ಗುಣಗಳು ಅದ್ಬುತವಾಗಿದೆ ಅಂತ ಕೆಲವು ಅಧ್ಯಯನಗಳಿಂದ ವರದಿಯಾಗಿವೆ. ಈ ಬೀಟ್ ರೂಟ್ ನಲ್ಲಿ ಅದ್ಭುತವಾದ ಪ್ರಯೋಜನಗಳಿವೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ;ರಕ್ತದಲ್ಲಿ ಕೆಂಪು ರಕ್ತ ಕಣಗಳ ಕೊರತೆಯಾಗಿ ಅನೀಮಿಯಾದಿಂದ ಬಳಲುವವರಿಗೆ ಇದೊಂದು ಅದ್ಭುತ ವರದಾನವಾಗಿ ಪರಿಣಮಿಸುತ್ತದೆ. ಪ್ರತಿ ದಿನ ಇದರ ಜ್ಯೂಸ್, ಹಸಿ ಸಲಾಡ್, ಪಲ್ಯ, ಸಾಂಬಾರ್ ಚಟ್ನಿ, ಸೂಪ್ ಹೀಗೆ ಹಲವಾರು ವಿಧಗಳಿಂದ ಸೇವಿಸುತ್ತಾ ಬನ್ನಿ ಆಗ ನಿಮಗೇ ತಿಳಿಯುವುದು ಇದರ ಪ್ರಯೋಜನ ಎಷ್ಟಿದೆ ಎಂದು.
ರಕ್ತಹೀನತೆಯನ್ನು ನಿವಾರಿಸುತ್ತದೆ, ಲೈಂಗಿಕ ಸಮಸ್ಯೆಗೆ ಪರಿಹಾರವಾಗುತ್ತದೆ, ಹೆಂಗಸರ ಮುಟ್ಟಿನ ಸಮಸ್ಯೆಗೂ ಉಪಕಾರಿಯಾಗಿದೆ. ಕಬ್ಬಿಣದ ಮತ್ತು ಕ್ಯಾಲ್ಸಿಯಂ ಅಂಶ ಇದರಲ್ಲಿ ಹೇರಳವಾಗಿ ಸಿಗುತ್ತದೆ. ನೈಟ್ರೇಟ್ ಅಂಶ ಅಧಿಕವಾಗಿರುವುದರಿಂದ ರಕ್ತದೊತ್ತಡವನ್ನು ತಡೆಯುತ್ತದೆ. ಕ್ಯಾನ್ಸರ್ ಕಾರಕ ಕಣಗಳನ್ನು ದೂರವಿಡುತ್ತದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗುತ್ತದೆ.
ರಕ್ತದ ಶುದ್ದಿಯಾಗಿ ಉತ್ತಮ ಆರೋಗ್ಯವನ್ನು ಬೀಟ್ ರೂಟ್ ತಂದುಕೊಡುತ್ತದೆ. ಕೆಟ್ಟ ಕೊಬ್ಬಿನಂಶವನ್ನು ತೊಡೆದು ಹಾಕುತ್ತದೆ ಗರ್ಭಿಣಿ ಹೆಂಗಸರಿಗೂ ಇದು ಬಹಳ ಒಳ್ಳೆಯದು. ಸಕ್ಕರೆ ಕಾಯಿಲೆ ಇರುವವರು ಇದನ್ನು ನಿಸ್ಸಂದೇಹವಾಗಿ ಸೇವಿಸಬಹುದು. ನರಗಳಲ್ಲಿ ಅಂಟಿರುವ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ.ಹೀಗೆ ಬೀಟ್ ರೂಟ್ ಮಾನವ ದೇಹಕ್ಕೆ ಅತ್ಯದ್ಭುತ ಆರೋಗ್ಯ ವರ್ಧಕ ತರಕಾರಿಯಾಗಿದೆ.