ಮಳೆಗಾಲ ಆರಂಭವಾಗಿದೆ ದೇಶದ ಹಲವೆಡೆ ಮುಂಗಾರು ಮಳೆಯ ಅಬ್ಬರ ಜೋರಾಗೆ ಇದೆ. ಇನ್ನೊಂದೆಡೆ ಮಳೆಯ ಅವಾಂತರಕ್ಕೆ ಹಲವು ನಷ್ಟಗಳು ಸಂಭವಿಸಿದೆ.
ಮಧ್ಯಪ್ರದೇಶದ ಹಲವೆಡೆ ನಿನ್ನೆ ಸುರಿದ ಭಾರಿ ಗಾಳಿ ಮಳೆ ಹಾಗೂ ಸಿಡಿಲಿಗೆ ಸುಮಾರು 9 ಮಂದಿ ಸಾವನ್ನಪ್ಪಿದ್ದಾರೆ. , ಜೊತೆಗೆ ಹಲವು ಮನೆಗಳು ಧರೆಗುರುಳಿರೋ ಬಗ್ಗೆ ವರದಿಯಾಗಿದೆ.
ಅಂದಹಾಗೆ ಮಧ್ಯಪ್ರದೇಶದ ಅನುಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಐವರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ, ಡಿಯೋರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೌಹರಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ನಿಂತಿದ್ದ ಮೂವರಿಗೆ ಸಿಡಿಲು ಬಡಿದಿದ್ದು ; ಸ್ಥಳದಲ್ಲೇ ಶ್ಯಾಮಾ ಬಾಯಿ ಮತ್ತು ಕೃಷ್ಣಪಾಲ್ ಸಿಂಗ್ ಎಂಬವರು ಸಾವನ್ನಪ್ಪಿದ್ದಾರೆ. ಇನ್ನು ಇದರಿಂದ ಗಾಯಗೊಂಡ ಪುಷ್ಪಲತಾ ದೇವಿ ಎಂಬಾಕೆಯನ್ನು ಆಸ್ಪತ್ರೆಗೆ ರವಾನಿಸಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.ಹವಮಾನ ಇಲಾಖೆ ಇನ್ನು ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಹೊರಹಾಕಿದ್ದು ;ಮೂರು ನಾಲ್ಕು ದಿವಸ ಮಳೆ ಮುಂದುವರೆಯುವ ಸಾಧ್ಯತೆಯಿದೆ.