ದೇಶದಲ್ಲಿ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಸೋಂಕು ಚಿತ್ರ ತಾರೆಯರು, ರಾಜಕೀಯ ನಾಯಕರನ್ನು ಬಿಟ್ಟಿಲ್ಲ. ಈಗಾಗಲೇ ಹಲವು ಪ್ರಮುಖರನ್ನು ಕಾಡುತ್ತಿರುವ ಕೊರೊನಾಕ್ಕೆ ಇದೀಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹ ತುತ್ತಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಸೋಂಕು ತಾಗಿರುವ ಕುರಿತು ಸ್ಪಷ್ಟಪಡಿಸಿದ್ದಾರೆ. ಪ್ರೀತಿಯ ದೇಶವಾಸಿಗಳೇ ನನಗೆ ಕೋವಿಡ್ ಸೋಂಕು ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ನಾನು ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದೇನೆ. ಅದರ ವರದಿ ಬಂದಿದ್ದು, ಸೋಂಕು ತಾಗಿರುವುದು ದೃಢವಾಗಿದೆ. ನನ್ನ ಸಂಪರ್ಕಕ್ಕೆ ಬಂದ ಸಹೋದ್ಯೋಗಿಗಳು ಕೋವಿಡ್ ಪರೀಕ್ಷೆ ಮಾಡಿಸಿ. ನನ್ನ ನಿಕಟ ಸಂಪರ್ಕಕ್ಕೆ ಬಂದವರುಯ ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತೇನೆ. ವೈದ್ಯರ ಸಲಹೆಯಂತೆ ಕ್ವಾರಂಟೈನ್ ಆಗುತ್ತೇನೆ. ಹೀಗಾಗಿ ವಿಡಿಯೀ ಕಾನ್ಫರೆನ್ಸ್ ಮೂಲಕ ರಾಜ್ಯದ ಕೋವಿಡ್ ಸ್ಥಿತಿಗತಿಗಳ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.