ಅಂಚೆ ಗ್ರಾಹಕರಿಗೆ ಸುಗಮ ರೂಪದ ಆಪ್!

ಬೆಂಗಳೂರು, ಅ. 29: ಕೊರೊನಾ ಸಂದರ್ಭದಲ್ಲಿ ಗ್ರಾಹಕರ ಸಮಯ ಉಳಿತಾಯದ ಜತೆಗೆ ತ್ವರಿತ ಅಂಚೆ ವಿಲೆವಾರಿಗೆ ಅನುಕೂಲವಾಗುವಂತೆ ಕರ್ನಾಟಕ ವಲಯ ಅಂಚೆ ಇಲಾಖೆಯು ದೇಶದಲ್ಲೇ ಮೊದಲ ಬಾರಿಗೆ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ಯಂತ್ರವನ್ನು ಪರಿಚಯಿಸಿದೆ.

ಎಟಿಎಂ ಮಾದರಿಯಲ್ಲಿರುವ ಈ ಯಂತ್ರವನ್ನು ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಪೂರ್ವ ವಲಯದ ಅಂಚೆ ಕಛೇರಿಯಲ್ಲಿ ಅಳವಡಿಸಲಾಗಿದೆ. ಜತೆಗೆ ಅಣಚೆ ಇಲಾಖೆಯು ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ಆಪ್‌ ಸಹ ಅಭಿವೃದ್ಧಿಪಡಿಸಿದ್ದು, ಬುಧವಾರ ಗ್ರಾಹಕರ ಸೇವೆಗೆ ಲಭ್ಯವಾಗಿಸಿದೆ. ಗ್ರಾಹಕರು ಅಂಚೆ ಕಛೇರಿಗೆ ಹೋಗಿ ಗಂಟೆಗಟ್ಟಲು ಕಾಯುವ ಬದಲು ಈ ಆಪ್‌ ಮೂಲಕ ಗ್ರಾಹಕರು ಸುಗಮವಾಗಿ ಅಂಚೆ ವ್ಯವಹಾರ ಮಾಡಬಹುದು. ‘ಡಿಜಿಟಲ್‌ ಇಂಡಿಯಾ’ ಯೋಜನೆಯಡಿ ಸಿ-ಡಾಕ್‌ ಬೆಂಗಳೂರು ಮತ್ತು ಕರ್ನಾಟಕ ವೃತ್ತ ಅಂಚೆ ಇಲಾಖೆ ಸಹಯೋಗದಲ್ಲಿ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ರೂಪಿಸಲಾಗಿದೆ.

Exit mobile version