ಅಂಚೆ ಚೀಟಿಯಲ್ಲಿ ಮುದ್ರಣವಾಯಿತು ಭೂಗತ ಪಾತಕಿಗಳ ಫೋಟೊಗಳು

ಲಖನೌ, ಡಿ. 29: ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಲು ಹಲವು ವಿಶೇಷ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಹಾಗೂ ಅಂಚೆ ಇಲಾಖೆ ಕಡೆಯಿಂದಲು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಗುತ್ತದೆ. ಅದು ಅಂಚೆ ಚೀಟಿಗಳ ಮೂಲಕ ಬಿಡುಗಡೆ ಮಾಡುವುದು ಒಂದು ಸಂಪ್ರದಾಯವಾಗಿದೆ. ಆದರೆ, ಉತ್ತರ ಪ್ರದೇಶದ ಅಂಚೆ ಇಲಾಖೆಯಿಂದ ಒಂದು ದ್ರೋಹವನ್ನು ಮಾಡಿದ್ದಾರೆ. ಅದೇನೆಂದರೆ ಉತ್ತರ ಪ್ರದೇಶ ಸರ್ಕಾರ ಹೊರತಂದಿರುವ ಅಂಚೆ ಚೀಟಿಯಲ್ಲಿ ಇಬ್ಬರು ಗ್ಯಾಂಗ್‍ಸ್ಟರ್‌ಗಳ ಚಿತ್ರವಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಂಚೆ ಇಲಾಖೆ ಪ್ರಕಟಿಸಿದ 5 ರೂ. ಅಂಚೆ ಚೀಟಿಯಲ್ಲಿ ಗ್ಯಾಂಗ್‍ಸ್ಟರ್‍ ಛೋಟಾ ರಾಜನ್ ಹಾಗೂ ಮುನ್ನಾ ಭಜರಂಗಿ ಚಿತ್ರವನ್ನು ಪ್ರಕಟಿಸಿ, ಮುಜುಗರಕ್ಕೆ ಒಳಗಾಗಿದೆ ಮತ್ತು ಇದನ್ನು ಪ್ರಕಟಿಸಿರುವ ಅಧಿಕಾರಿಯನ್ನು ಸರ್ಕಾರ ಅಮಾನತುಗೊಳಿಸಿದೆ.

ಈ ಕುರಿತಾಗಿ ತನಿಖೆ ನಡೆಯುತ್ತಿದ್ದು, ಇದರ ಹಿಂದೆ ಯಾವುದಾದರು ದುರುದ್ದೇಶ ಇರಬಹುದೇ ಎಂಬ ತನಿಖೆಗೆ ಆದೇಶಿಸಲಾಗಿದೆ. ಈ ಕೃತ್ಯವನ್ನು ಮಾಧ್ಯಮದೊಂದಿಗೆ ನಂಟುವಿರುವ  ಒಬ್ಬ ವ್ಯಕ್ತಿ ಮುನ್ನ ಮತ್ತು ಛೋಟಾ ಹೆಸರಿನಲ್ಲಿ ಫಾರ್ಮ್‍ಗಳನ್ನು ಭರ್ತಿ ಮಾಡಿ ಇಬ್ಬರ ಫೋಟೊಗಳನ್ನು ನೀಡಿದ ವ್ಯಕ್ತಿ ತನ್ನ ಹತ್ತಿರವಿದ್ದ ಗುರುತಿನ ಚೀಟಿ ತೋರಿಸಿ ಇದನ್ನು ಅಂಚೆ ಚೀಟಿಗಳಾಗೆ ಮುದ್ರಿಸು ಎಂದು ಅಂಚೆ ನೌಕರನಿಗೆ ಹೇಳಿದ ಅದನ್ನು ಪ್ರಶ್ನಿಸಿದಾಗ ಅವರಿಬ್ಬರೂ ಗಣ್ಯ ವ್ಯಕ್ತಿಗಳು ನನಗೆ ಪರಿಚಿತರು ಎಂದು ಹೇಳಿದ್ದಾನೆ. ನಂತರ ಪೋಸ್ಟ್ ಮ್ಯಾನ್ ವಿಚಾರಣೆ ನಡೆಸದೆ ಅದನ್ನು ಮುದ್ರಣಕ್ಕೆ  ಕಳುಹಿಸಿದ್ದಾನೆ. ಆದ್ದರಿಂದ ಈ ಅಂಚೆ ಇಲಾಖೆಯ ಕ್ಲರ್ಕ್‍ನನ್ನು ಅಮಾನತು ಮಾಡಲಾಗಿದೆ.

Exit mobile version