ಅನ್‌ಲಾಕ್‌ 5.0 ವಿಸ್ತರಿಸಿದ ಗೃಹ ಸಚಿವಾಲಯ

ಹೊಸದಿಲ್ಲಿ, ಅ. 27: ಈಗಾಗಲೇ ನೀಡಿರುವ ಅನ್‌ಲಾಕ್ 5.0ರ ಮಾರ್ಗಸೂಚಿಗಳನ್ನು ಗೃಹ ಸಚಿವಾಲಯವು ಮಂಗಳವಾರ ವಿಸ್ತರಿಸಿದ್ದು, ಈ ವಿಸ್ತರಣೆಯ ಅವಧಿಯು ನವೆಂಬರ್ 30ರ ತನಕ ಇರಲಿದೆ ಎಂದು ಸೂಚಿಸಿದೆ.

ಈಗಾಗಲೇ ಈ ಹಿಂದೆ ಪ್ರಕಟಿಸಿದ ಅನ್ ಲಾಕ್ 5.0 ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ನಿರ್ದಿಷ್ಟ ಚಟುವಟಿಕೆಗಳಿಗೆ ನಿರ್ಬಂಧಗಳೊಂದಿಗೆ ಅವಕಾಶ ನೀಡಲಾಗಿತ್ತು. ಇವುಗಳಲ್ಲಿ ಗೃಹ ಸಚಿವಾಲಯ ಅನುಮತಿ ನೀಡಿರುವ ಅಂತರ್ ರಾಷ್ಟ್ರೀಯ ವಾಯುಯಾನ, ತರಬೇತಿ ಉದ್ದೇಶಕ್ಕಾಗಿ ಕ್ರೀಡಾಪಟುಗಳಿಗೆ ಈಜುಕೊಳಗಳನ್ನು ತೆರೆಯುವುದು, ಸಿನೆಮಾ ಹಾಲ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳಿಗೆ ಶೇ.40ರಷ್ಟು ಆಸನ ಸಾಮರ್ಥ್ಯದೊಂದಿಗೆ ಮತ್ತೆ ತೆರಯುವುದು ಸೇರಿದೆ.

Exit mobile version