ಅಪ್ಪನ ಮೂಢನಂಬಿಕೆಯಿಂದ ಪ್ರಾಣ ಬಿಟ್ಟ11 ವರ್ಷಧ ಬಾಲಕಿ

ತಿರುವನಂತಪುರಂ: ಅಪ್ಪನ  ನಿರ್ಲಕ್ಷ್ಯದಿಂದಾಗಿ ಜ್ವರದಿಂದ ಬಳಲುತ್ತಿದ್ದ ಬಾಲಕಿ ಪ್ರಾಣ ಬಿಟ್ಟಿದ್ದಾಳೆ,ಇಂತಹ ಒಂದು ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.ಮೃತ ಪಟ್ಟ ಬಾಲಕಿ 11 ವರ್ಷದ ಫಾತಿಮ ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ: ಕೇರಳದ ಕಣ್ಣೂರಿನಲ್ಲಿ ಫಾತಿಮಾರವರಿಗೆ ತೀವ್ರವಾಗಿ    ಜ್ವರ ಇದ್ಧಿರೋದರಿಂದ ಈ ಸಂದರ್ಭದಲ್ಲಿಅವರ ಅಪ್ಪ ಬಾಲಕಿಯನ್ನು ಆಸ್ಫತ್ರೆಗೆ ಕರೆದುಕೊಂಡು ಹೋಗುವ ಬದಲು  ಅವರ ಮುಸ್ಲಿಂ ಧರ್ಮದ ಮುಖಂಡರಾಗಿದ್ದ ಮೊಹಮ್ಮದ್‌ ಉವೈಸ್‌ ರವರ ಬಳಿ ಕರೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲಿ ಬಾಲಕಿಯ  ಮೇಲೆ ಯಾರೋ ಮಾಟಮಂತ್ರ ಮಾಡಿಸಿದ್ದಾರೆ ಎಂದು ತಿಳಿದು ಬರುತ್ತದೆ. ಬಾಲಕಿಗೆ ಪವಿತ್ರವಾದ  ನೀರು ಕುಡಿಸಿ ಅವರ ಎದುರಿಗೆ ಕುರಾನ್ ಓದಿದರೆ ಮಗಳು ಆರೋಗ್ಯವಾಗುತ್ತಾಳೆ ಎಂದು ಸಲಹೆ ನೀಡಿಲಾಗಿದೆ. ಬಾಲಕಿಗೆ ಜ್ವರ ತೀವ್ರವಾಗಿತ್ತು ಆದರೂ ತಂದೆ ಮುಖಂಡ ಹೇಳಿದಂತೆ ನೀರು ಕುಡಿಸಿ ಕುರಾನ್‌ ಓದತೊಡಗಿದ್ದ,ಅಷ್ಟೊತ್ತಿಗಾಗಲೆ ಬಾಲಕಿ ಮೃತಪಟ್ಟಿದ್ದಾಳೆ.ನೆರೆಹೊರೆಯವರು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಎಷ್ಟು ಹೇಳಿದರೂ ಅವರು ಕೇಳಲಿಲ್ಲ.ಈ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ಹಾಗೂ ಧರ್ಮದ ಮುಖಂಡನನ್ನು ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ಧಾರೆ.

Exit mobile version