ಅ. 16ರಂದು 75 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ

ದೆಹಲಿ, ಅ.14: ಆಹಾರ ಹಾಗೂ ಕೃಷಿ ಸಂಸ್ಥೆಯ 75ನೇ ವರ್ಷದ ವಾರ್ಷಿಕೋತ್ಸವದ ಸ್ಮರಣಾರ್ಥ ಅಕ್ಟೋಬರ್​ 16ರಂದು ಪ್ರಧಾನಿ ಮೋದಿ 75 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಭಾರತ ಹಾಗೂ ಎಫ್​ಎಓ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಪ್ರಧಾನಿ ಮೋದಿ ನೀಡಿರುವ ಆದ್ಯತೆಯನ್ನ ಜಗತ್ತಿಗೆ ಸಾರುವ ನಿಟ್ಟಿನಲ್ಲಿ 8 ಬಗೆಯ ಬೆಳೆಗಳನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ ಎಂದು ಪ್ರಧಾನಿ ಕಛೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ದೇಶದ ಅಂಗನವಾಡಿಗಳು, ಕೃಷಿ ವಿಜ್ಞಾನ ಕೇಂದ್ರಗಳು, ಸಾವಯವ ಹಾಗೂ ತೋಟಗಾರಿಕಾ ಇಲಾಖೆಗಳು ಈ ಮಹತ್ವಪೂರ್ಣ ಕಾರ್ಯಕ್ಕೆ ಸಾಕ್ಷಿಯಾಗಲಿವೆ. ಇನ್ನುಳಿದಂತೆ ಕೇಂದ್ರದ ಕೃಷಿ ಸಚಿವರು, ಹಣಕಾಸು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಜನಸಾಮಾನ್ಯರನ್ನು ಆರ್ಥಿಕತೆ ಹಾಗೂ ಪೌಷ್ಠಿಕತೆ ಹೆಚ್ಚಿಸುವಲ್ಲಿ ಎಫ್​ಎಒನ ಪಾತ್ರ ಪ್ರಮುಖವಾದದ್ದು. ಭಾರತ ಎಫ್​ಎಒ ಜೊತೆ ಐತಿಹಾಸಿಕ ಒಡನಾಟವನ್ನು ಹೊಂದಿದೆ ಎಂಬುದಾಗಿ ಹೇಳಿದೆ.

Exit mobile version