ಬಾಲಿವುಡ್ ರಂಗಕ್ಕೆ ಇಂದು ೩೪ ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಇಡೀ ಬಾಲಿವುಡ್ ರಂಗವನ್ನು ಬೆಚ್ಚಿಬೀಳಿಸಿದೆ . ಮುಂಬೈನ ತಮ್ಮ ನಿವಾಸದಲ್ಲಿ ನೇಣುಬಿಗಿದ ರೀತಿಯಲ್ಲಿ ಶವ ಪತ್ತೆಯಾಗಿದೆ.
ಇನ್ನು ತಮ್ಮ ಮ್ಯಾನೇಜರ್ ಸಾಲಿಯನ್ ಕೂಡ ಕಳೆದ ವಾರ ೧೪ ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು ಇದು ಇದಿಗ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಇನ್ನೊಂದಡೆ ಸುಶಾಂತ್ ಕಳೆದ ೬ ತಿಂಗಳಿಂದ ಖಿನ್ನತೆಗೆ ಒಳಗಾಗಿದ್ರು ಅನ್ನೋದು ಮೂಲಗಳಿಂದ ಮಾಹಿತಿ
ಪವಿತ್ರ ರಿಸ್ತಾ ಅನ್ನೋ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಶಾಂತ್ ಸಿಂಗ್ ರಜಪೂತ್ , ನಂತರ ೨೦೦೮ ರಲ್ಲಿ ಕೈ ಪೋ ಚೇ ಅನ್ನೋ ಸಿನಿಮಾದ ಮೂಲಕ ಬಿಗ್ ಸ್ಕ್ರೀನಿಗೆ ಎಂಟ್ರಿ ಕೊಟ್ಟಿದ್ದಾರೆ . ಬಳಿಕ ದೋನಿ ಜೀವನಾಧಾರಿತ ಚಿತ್ರ ಎಂ.ಎಸ್ ಧೋನಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಹೀಗೆ ಸುಮಾರು ೧೧ ಸಿನಿಮಾಗಳಲ್ಲಿ ನಟಿಸಿರೋ ಸುಶಾಂತ್ ೨೦೧೩ರ ಫಿಲ್ಂಫೇರ್ ಪ್ರಶಸ್ತಿಗು ಭಾಜನರಾಗಿದ್ದರು . ಸರಳ ನಟನಾಗಿರೋ ಸುಶಾಂತ್ ಕೊನೆಯ ಚಿತ್ರ ಚಿಚೋರೆಯಾಗಿದ್ದು . ಉತ್ತಮವಾಗಿ ಚಿತ್ರದಲ್ಲಿ ನಟಿಸಿದ್ರು .