ಆತ್ಮಹತ್ಯೆಗೆ ಶರಣಾದ ನಟ ಸುಶಾಂತ್ ಸಿಂಗ್ ರಜಪೂತ್

ಬಾಲಿವುಡ್ ರಂಗಕ್ಕೆ ಇಂದು ೩೪  ವರ್ಷದ  ನಟ ಸುಶಾಂತ್  ಸಿಂಗ್  ರಜಪೂತ್  ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಇಡೀ ಬಾಲಿವುಡ್ ರಂಗವನ್ನು ಬೆಚ್ಚಿಬೀಳಿಸಿದೆ . ಮುಂಬೈನ ತಮ್ಮ ನಿವಾಸದಲ್ಲಿ ನೇಣುಬಿಗಿದ ರೀತಿಯಲ್ಲಿ ಶವ ಪತ್ತೆಯಾಗಿದೆ.

 ಇನ್ನು ತಮ್ಮ ಮ್ಯಾನೇಜರ್ ಸಾಲಿಯನ್ ಕೂಡ ಕಳೆದ ವಾರ ೧೪ ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು ಇದು ಇದಿಗ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಇನ್ನೊಂದಡೆ ಸುಶಾಂತ್  ಕಳೆದ ೬ ತಿಂಗಳಿಂದ ಖಿನ್ನತೆಗೆ ಒಳಗಾಗಿದ್ರು ಅನ್ನೋದು  ಮೂಲಗಳಿಂದ ಮಾಹಿತಿ

ಪವಿತ್ರ ರಿಸ್ತಾ ಅನ್ನೋ  ಸೀರಿಯಲ್  ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಶಾಂತ್ ಸಿಂಗ್ ರಜಪೂತ್ , ನಂತರ ೨೦೦೮ ರಲ್ಲಿ  ಕೈ ಪೋ ಚೇ ಅನ್ನೋ ಸಿನಿಮಾದ ಮೂಲಕ ಬಿಗ್ ಸ್ಕ್ರೀನಿಗೆ ಎಂಟ್ರಿ ಕೊಟ್ಟಿದ್ದಾರೆ . ಬಳಿಕ ದೋನಿ ಜೀವನಾಧಾರಿತ ಚಿತ್ರ ಎಂ.ಎಸ್ ಧೋನಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಹೀಗೆ ಸುಮಾರು ೧೧  ಸಿನಿಮಾಗಳಲ್ಲಿ ನಟಿಸಿರೋ ಸುಶಾಂತ್  ೨೦೧೩ರ ಫಿಲ್ಂಫೇರ್ ಪ್ರಶಸ್ತಿಗು ಭಾಜನರಾಗಿದ್ದರು . ಸರಳ ನಟನಾಗಿರೋ ಸುಶಾಂತ್ ಕೊನೆಯ ಚಿತ್ರ ಚಿಚೋರೆಯಾಗಿದ್ದು . ಉತ್ತಮವಾಗಿ ಚಿತ್ರದಲ್ಲಿ ನಟಿಸಿದ್ರು .

Exit mobile version