ನಕಲಿ ಗುರುತನ್ನು ಹೊಂದಿದ್ದೀರಾ? ಎಚ್ಚರ ‘ಆಧಾರ್‌’ನಲ್ಲಿ ಸಿಕ್ಕಿ ಬೀಳ್ತೀರಾ

ಜನರ ಗುರುತು ಪತ್ತೆಗಾಗಿ  ಆಧಾರ್​ ಕಾರ್ಡ್​ನ್ನು ನಿಭಾಯಿಸುತ್ತಿರುವ ಯುಐಡಿಎಐ ಜನತೆಗೆ ಹೊಸ ಸೌಲಭ್ಯವೊಂದನ್ನು ನೀಡಿದೆ. ಇದರ ಸಹಾಯದಿಂದ ದೇಶದ ಜನರಿಗೆ ತಮ್ಮ ನೋಂದಾಯಿತ ನಂಬರ್‌ನ್ನು ತಾವೇ ಪರಿಶೀಲನೆ ಮಾಡಬಹುದಾಗಿದೆ. ಹಾಗೂ ಇನ್ನೊಬ್ಬ ವ್ಯಕ್ತಿಯ ಗುರುತು ಪರಿಶೀಲನೆ ಮಾಡಲು ಕೂಡ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.

UIDAI ವೆಬ್​ಸೈಟ್(uidai.gov.in) ​ಗೆ ಭೇಟಿ ನೀಡಿ. ಅಲ್ಲಿರುವ ಸೇವೆಗಳ ವಿಭಾಗದಲ್ಲಿ ‘ಆಧಾರ್​ ಸಂಖ್ಯೆಯನ್ನು ಪರಿಶೀಲಿಸಿ ನಿಮ್ಮ ಆಯ್ಕೆಯನ್ನು  ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಪರಿಶೀಲನೆ ಮಾಡಬೇಕಾದ ನಿಮ್ಮ  ಆಧಾರ್ ಸಂಖ್ಯೆಯನ್ನು ನಮೂದಿಸಿ. ಆಧಾರ್​ ವೆಬ್​ಸೈಟ್​ನಲ್ಲಿ ಕೇಳಲಾಗುವ ಲಿಂಗ, ವಯಸ್ಸು, ಹೆಸರು ಹಾಗೂ ನೋಂದಾಯಿತ ಮೊಬೈಲ್​ ಸಂಖ್ಯೆ ಹೀಗೆ ಕೇಳಿರುವ ಎಲ್ಲ ವಿವರಗಳನ್ನ ಒದಗಿಸಬೇಕು. ಬಳಿಕ ಆಧಾರ್ ನಂಬರ್ ಹೊಂದಿರುವ ವ್ಯಕ್ತಿಯ ಫೋಟೋ ನಿಮ್ಮ ಮೊಬೈಲ್​ ಸ್ಕ್ರೀನ್​​ನಲ್ಲಿ ಕಾಣುತ್ತದೆ. ಅಲ್ಲದೆ ಆಧಾರ್‌ನಲ್ಲಿ “QR ಕೋಡ್ ಸ್ಕ್ಯಾನ್ ಅನ್ನು ನೀಡಲಾಗುತ್ತದೆ. ಇದನ್ನು ಸ್ಕ್ಯಾನ್​ ಮಾಡುವ ಮೂಲಕ ವ್ಯಕ್ತಿಯ ಗುರುತು ಸತ್ಯವೋ ಸುಳ್ಳೋ ಎಂಬುದನ್ನು ನೀವು ಪತ್ತೆ ಹಚ್ಚಬಹುದಾಗಿದೆ. ಇದು ಗುರುತು ಪತ್ತೆಗೆ ಸುಲಭವಾಗಿದೆ.

Exit mobile version