ಆನ್‌ಲೈನ್‌ ಶಿಕ್ಷಣಕ್ಕೆ ಹೊಸ ಮಾರ್ಗಸೂಚಿ

ಬೆಂಗಳೂರು, ಅ. 28: ರಾಜ್ಯ ಸರ್ಕಾರದಿಂದ ಆನ್ ಲೈನ್ ಶಿಕ್ಷಣಕ್ಕೆ ಸಂಬಂಧಿಸಿದ ಮಾರ್ಗಸೂಚಿ ಪ್ರಕಟವಾಗಿದ್ದು, ಪ್ರತಿ ತರಗತಿಯ ಗರಿಷ್ಠ ಸಮಯ 30 ನಿಮಿಷಗಳಿಗೆ ಸೀಮಿತಗೊಳಿಸಲಾಗಿದ್ದು, ವಯೋಮಾನಕ್ಕೆ ತಕ್ಕಂತೆ ದಿನಕ್ಕೆ 1-4 ತರಗತಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

2ನೇ ತರಗತಿವರೆಗೆ ವಾರಕ್ಕೆ ಪರ್ಯಾಯ ದಿನಗಳಲ್ಲಿ ಬೋಧನೆ ಮಾಡಬಹುದಾಗಿದ್ದು, 3ನೇ ತರಗತಿ ನಂತರ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ಬೋಧನೆ ಮಾಡಬಹುದು. 2ನೇ ತರಗತಿ ವಿದ್ಯಾರ್ಥಿಗಳಿಗೆ ಪೋಷಕರ ಹಾಜರಿ ಕಡ್ಡಾಯವಾಗಿದೆ. ಒಂದು ವೇಳೆ ಸಾಧ್ಯವಿಲ್ಲದಿದ್ದರೆ ಪೋಷಕರು ಅನುಮತಿ ನೀಡಿದರೆ ವಯಸ್ಕರು ಉಪಸ್ಥಿತರಿರಲು ಅವಕಾಶ ನೀಡಬಹುದು.

3-5ನೇ ತರಗತಿವರೆಗೆ ದಿನಕ್ಕೆ 30 ನಿಮಿಷಗಳ 2 ಕ್ಲಾಸ್ ತೆಗೆದುಕೊಳ್ಳಬಹುದು. 6-8ನೇ ತರಗತಿವರೆಗೆ ದಿನಕ್ಕೆ 30-45 ನಿಮಿಷಗಳವರೆಗೆ 3 ಕ್ಲಾಸ್ ತೆಗೆದುಕೊಳ್ಳಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Exit mobile version