ಇಂದು ಆಗಸದಲ್ಲಿ ‘ಬ್ಲೂ ಮೂನ್’..!

ಬೆಂಗಳೂರು, ಅ. 31: ಇಂದು ಖಗೋಳದಲ್ಲಿ ಅಪರೂಪದ ವಿಶೇಷವಾದ ವಿಸ್ಮಯವೊಂದು  ನಡೆಯಲಿದ್ದು, ಅಪರೂಪದ ಬ್ಲೂ ಮೂನ್​(ಚಂದ್ರ) ದರ್ಶನವಾಗಲಿದೆ. ಸಾಮಾನ್ಯವಾಗಿ ವರ್ಷದಲ್ಲಿ 12 ಸಲ ಕಾಣಿಸಿಕೊಳ್ಳುವ ಪೂರ್ಣಚಂದ್ರನ ಹೆಚ್ಚುವರಿ ಆಗಮನವೇ ಬ್ಲೂ ಮೂನ್ ( ನೀಲಿ ಚಂದ್ರ).

19 ವರ್ಷಗಳ ನಂತರ ಇದರ ದರ್ಶನವಾಗುತ್ತಿದೆ. ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬಂದರೆ ಅದಕ್ಕೆ ‘ಬ್ಲೂ ಮೂನ್’ ಎಂದು ಕರೆಯಲಾಗುತ್ತದೆ. ಈ ಹಿಂದೆ ಇದೇ ತಿಂಗಳ ಅಕ್ಟೋಬರ್​ 1ರಂದು ಚಂದ್ರ ಕಾಣಿಸಿಕೊಂಡಿದ್ದ. ಆದರೆ ಇದೀಗ ಮತ್ತೊಮ್ಮೆ ಗೋಚರವಾಗುತ್ತಿದೆ. ಈ ಹಿಂದೆ 2001ರ ಜೂನ್ ತಿಂಗಳಲ್ಲಿ ‘ಬ್ಲೂ ಮೂನ್’ ಕಾಣಿಸಿಕೊಂಡಿತ್ತು. ಮುಂದಿನ ಬ್ಲೂ ಮೂನ್ 2050ರ ಸೆ. 30ರಂದು ಕಾಣಿಸಿಕೊಳ್ಳಲಿದೆ.

1983ರಲ್ಲಿ ಇಂಡೋನೇಶ್ಯಾದಲ್ಲಿ ಕ್ರಕೋಟಾ ಎಂಬ ಅಗ್ನಿ ಪರ್ವತ ಸ್ಪೋಟಗೊಂಡಿದ್ದು ಅದರ ದಟ್ಟನೆಯ ಹೊಗೆ ಆಕಾಶಕ್ಕೆ ಚಿಮ್ಮಿದ್ದಾಗ ಆ ಮೋಡದ ಕಣಗಳು ರಾತ್ರಿಯಲ್ಲಿ ಕೆಂಪು ಬೆಳಕನ್ನು ತೊಲಗಿಸಿ ನೀಲಿ ಬಣ್ಣದಲ್ಲಿ ಚಂದ್ರನನ್ನು ಕಾಣುವಂತೆ ಮಾಡಿತ್ತು. ಅತ್ಯಂತ ಅಪರೂಪದ ವಿದ್ಯಾಮಾನವಾಗಿದ್ದ ಚಂದ್ರ ಹೆಚ್ಚುವರಿ ಅವಧಿಯಲ್ಲಿ ಸಂಪೂರ್ಣವಾಗಿ ಕಂಡ ಕಾರಣ ನೀಲಿ ಚಂದ್ರ ಎಂಬ ಹೆಸರನ್ನು ಪಡೆದುಕೊಂಡ. ಎಂದು ವಿಜ್ಞಾನಿಗಳು ಹೇಳಿದ್ದಾರೆ.

Exit mobile version