ಇಥಿಯೋಪಿಯಾ; ಬಂದೂಕು ಧಾರಿಗಳ ದಾಳಿಯಲ್ಲಿ 34 ಜನ ಸಾವು

ಇಥಿಯೋಪಿಯಾ, ನ. 16: ಬಂದೂಕು ಧಾರಿಗಳು ಶನಿವಾರ ರಾತ್ರಿ ಬಸ್ ಮೇಲೆ ನಡೆಸಿದ ಧಾಳಿಯಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಇಥಿಯೋಪಿಯಾದಲ್ಲಿ ನಡೆದಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ. ಉತ್ತರ ಭಾಗದಲ್ಲಿ ಮಿಲಿಟರಿ ಕಾರ್ಯಾಚರಣೆಯ ಮಧ್ಯೆ ಇಥಿಯೋಪಿಯಾ ದೇಶದಲ್ಲಿ ಭದ್ರತಾ ನಿರ್ವಾತದ ಭೀತಿ ಹೆಚ್ಚುತ್ತಿದೆ.

ಇಥಿಯೋಪಿಯನ್ ಮಾನವ ಹಕ್ಕುಗಳ ಆಯೋಗದ ಪ್ರಕಾರ ಬೆನಿಶಾಂಗುಲ್ – ಗುಮುಜ್ ಪ್ರದೇಶದಲ್ಲಿ ನಡೆದ ಭೀಕರ ದಾಳಿಯಲ್ಲಿ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಭಾಗದ ಇತರೆ ಸ್ಥಳಗಳಲ್ಲಿಯೂ ಇದೇ ರೀತಿಯ ದಾಳಿಗಳು ನಡೆದ ವರದಿಯಾಗಿದ್ದು, ಜನರಲ್ಲಿ ತೀವ್ರ ಭಯ ಉಂಟಾಗಿದೆ ಎಂದು ಆಯೋಗ ತಿಳಿಸಿದೆ.

ಬೆನಿಶಂಗುಲ್-ಗುಮುಜ್ ಪ್ರಾಂತ್ಯದಲ್ಲಿ ಪದೇ ಪದೇ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಮತ್ತು ಫೆಡರಲ್ ಆಡಳಿತವು ಇಲ್ಲಿ ಭದ್ರತೆ ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಡೇನಿಯಲ್ ಬೆಕೆಲೆ ಒತ್ತಾಯಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಇದೇ ಜಾಗದಲ್ಲಿ ನಡೆದಿದ್ದ ಸಶಸ್ತ್ರ ಭಯೋತ್ಪಾದಕರು ನಡೆಸಿದ ದಾಳಿಗೆ ಕನಿಷ್ಠ 45 ಮಂದಿ ಬಲಿಯಾಗಿದ್ದರು.

Exit mobile version