ದೀಪಾವಳಿ ಹಬ್ಬಕ್ಕೆ ಸರ್ಕಾರದಿಂದ ಗಿಫ್ಟ್‌: ಪೆಟ್ರೋಲ್‌ ಡೀಸೆಲ್‌ ಬೆಲೆ ಇಳಿಕೆ

petrol bunk

ದೆಹಲಿ: ಇತ್ತೀಚಿನ ದಿನಗಳಲ್ಲಿ ದಿನಬಳಕೆಯ ವಸ್ತುಗಳ ದರವೂ ಕೂಡ ಹೆಚ್ಚಳವಾಗಿತ್ತು ದೇಶದಲ್ಲಿ ಸತತವಾಗಿ ಆದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಾಗಿ  ಜನಸಾಮಾನ್ಯರು ತುಂಬಾ ಕಷ್ಟಪಡುವಂತಾಗಿತ್ತು. ಇದೀಗ ದೇಶದ ಜನತೆಗೆ ಸರ್ಕಾರ ದೀಪಾವಳಿಗೆ ಒಂದು  ಉಡುಗೊರೆ ಕೊಟ್ಟಿದೆ. ಪೆಟ್ರೋಲ್ ಮತ್ತು  ಡೀಸೆಲ್ ಬೆಲೆ ಇಳಿಕೆ ಆಗಲಿದೆ. ಡೀಸೆಲ್ ಮೇಲೆ ಅಬಕಾರಿ ಸುಂಕ 10 ರೂಪಾಯಿ ಕಡಿತ ಮಾಡಲಾಗಿದೆ. ಪೆಟ್ರೋಲ್ ಮೇಲೆ ಅಬಕಾರಿ ಸುಂಕ 5 ರೂಪಾಯಿ ಕಡಿತಗೊಳಿಸಲಾಗಿದೆ. ಇಂದು (ನವೆಂಬರ್ 3) ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ ಆಗಲಿದೆ.

 ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್ (VAT) ಕೂಡ ಇಳಿಕೆ ಮಾಡುವುದಾಗಿ ಬುಧವಾರದಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಇಂಧನದ ದರದ ಹೊರೆ ಇಳಿಸುವ ರೂಪದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೀಪಾವಳಿಗೆ ದೇಶದ ಜನತೆಗೆ ಉಡುಗೊರೆ ನೀಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 2100 ಕೋಟಿ ರೂಪಾಯಿ ಹೊರೆಯಾಗುತ್ತದೆ,ಆದರೂ ನಾಗರಿಕರಿಗೆ 95.90 ಪೆಟ್ರೋಲ್‌ ಮತ್ತು 81.50 ಡೀಸೆಲ್‌(ಅಂದಾಜು) ದರವಾಗಲಿದೆ.

Exit mobile version