ಇನ್ಮುಂದೆ ಕಂಡಲ್ಲಿ ಕಸ ಬಿಸಾಡಿದ್ರೆ ದಂಡ ಗ್ಯಾರೆಂಟಿ :

ಕಂಡ ಕಂಡಲ್ಲಿ ಕಸ ಎಸೆಯುವುದು ಈಗ ಜನರಿಗೆ ಸರ್ವೇ ಸಾಮಾನ್ಯವಾಗಿದೆ. ಎಷ್ಟೇ ಹೇಳಿದರೂ  ಕೇಳದೆ ಸಾರ್ವಜನಿಕರು  ಕಸ ಬಿಸಾಡೋದನ್ನು  ಹೀಗೇ ಮುಂದುವರಿಸಿದರೆ ಬೆಂಗಳೂರು ಗಬ್ಬುನಾರುವುದರಲ್ಲಿ ಸಂದೇಹವಿಲ್ಲ.

ಈ ಹಿನ್ನಲೆಯಲ್ಲಿ ಪೌರ ಕಾರ್ಮಿಕರು ಬೊಮ್ಮನಹಳ್ಳಿಯ ಮಂಗಮ್ಮನ ಪಾಳ್ಯದಲ್ಲಿ ಕಸ ವಿಲೇವಾರಿ  ಗುತ್ತಿಗೆದಾರರು, ಮಾರ್ಷೆಲ್ ಗಳು, ಚಾಲಕರು ಸೇರಿ ಮಾತುಕತೆ ನಡೆಸಿ,  ನಗರದಲ್ಲಿ ಕಸವಿಲೇವಾರಿ ಸಮಸ್ಯೆಯನ್ನು ಹತ್ತಿಕ್ಕಲು  ಹೊಸ ಗಾರ್ಬೇಜ್ ವಿಲೇವಾರಿ ಪದ್ದತಿಯನ್ನು ಜಾರಿಗೆ ತರುವುದೆಂದು ಮನವಿ ಮಾಡಿಕೊಂಡರು.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಕಂಡರೆ  ಪೌರ ಕಾರ್ಮಿಕರು ಮಾರ್ಷೆಲ್ ಗಳಿಗೆ ತಿಳಿಸಬೇಕು. ಅಂತವರಿಗೆ ದಂಡ ವಿಧಿಸುವುದು ಮತ್ತು ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದು ಅದನ್ನೂ ಕೇಳದವರ ವಿರುದ್ದ ಎಪ್ ಐ ಆರ್ ದಾಖಲಿಸಲಾಗುವುದು ಎಂದು  ಬಿ ಬಿ ಎಂ ಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಸಿದರು.  ಮನೆ ಮನೆಯಿಂದ ಕಸ ಸಂಗ್ರಹಿಸಿದರೂ ಇಂತಹ ಕ್ರಮ ಮುಂದುವರಿಯಬಾರದು. 

ಪೌರಕಾರ್ಮಿಕರು ಕಸ ಸಂಗ್ರಹಿಸುವ ಸಮಯದಲ್ಲಿ ಕೈಗಳಿಗೆ ಗ್ಲೌಸ್ ಧರಿಸಬೇಕು. ಮುಖಕ್ಕೆ ಮಾಸ್ಕ್  ಕಡ್ಡಾಯವಾಗಿ ಹಾಕಬೇಕು, ಊಟ ಮಾಡುವಾಗ ಕೈಯಿಂದ ಗ್ಲೌಸ್ ತೆಗೆದು ಕೈಯನ್ನು ಶುಚಿಗೊಳಿಸಿ  ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸಬೇಕು. 

ಮನೆಗೆ ಹೋದ ಮೇಲೆ ಗೌನ್ ಗಳನ್ನು ಮನೆಯ ಹೊರಗಡೆ ಇಟ್ಟು ಮರುದಿನ ಕೆಲಸಕ್ಕೆ ಹಾಜರಾಗುವ ವೇಳೆ ಮಾತ್ರ ಗೌನ್  ಧರಿಸಿ ಆರೋಗ್ಯ ಕಾಪಾಡಬೇಕು. ಎಂದು ಆಯುಕ್ತರು ಮನವಿ ಮಾಡಿಕೊಂಡರು.

Exit mobile version