ಇನ್ಮುಂದೆ ಕೃಷಿ ಭೂಮಿ ಯಾರೂ ಬೇಕಾದ್ರೂ ಖರೀದಿಸಬಹುದು : ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕ್ಕೆ ಅಂಕಿತ

ಬೆಂಗಳೂರು: ವಿಧಾನ ಸಭೆಯಲ್ಲಿ ಇಂದು (26-9-2020) ತೀರ್ವ ವಿರೋಧಗಳ ನಡುವೆಯೂ ಭೂಸುಧಾರಣಾ ತಿದ್ದುಪಡಿ ವಿಧೇಯಕ ಕಾಯಿದೆ ಯನ್ನು ಅಂಗೀಕರಿಸಲಾಗಿದೆ.

 ಯಾರು ಬೇಕಾದರೂ ಕೃಷಿಭೂಮಿಯನ್ನು ಖರೀದಿಸಬಹುದಾದ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಪ್ರತಿ ಪಕ್ಷಗಳ ತೀರ್ವ ವಿರೋಧವಿದ್ದರೂ, ಈ ಕುರಿತು ಸುಧೀರ್ಘ ಚರ್ಚೆಗಳು ನಡೆದರೂ , ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರೂ ಈ ಎಲ್ಲಾ ಚರ್ಚೆಗಳ ನಡುವೆಯೂ  ವಿಧಾನ ಸಭೆಯಲ್ಲಿ ಈ ಮಸೂದೆ ಕುರಿತು ಯಾವುದೇ ಚರ್ಚೆಗಳಿಗೆ ಉತ್ತರಿಸದ ಕಂದಾಯ ಸಚಿವ ಆರ್ ಅಶೋಕ್, ಈ ಕಾಯಿದೆ ಕೃಷಿಯ ಒಲವಿರುವ ಜನರಿಗೆ ಬಹಳ ಅನುಕೂಲವಾಗಲಿದೆ.

ಬೀಡುಬಿಟ್ಟ ಜಮೀನಿನ ಉಪಯೋಗ ಮಾಡಲು ಆಸಕ್ತರಿಗೆ  ಅನುಕೂಲವಾಗಲಿದೆ ಎಂದು ಕಾಯ್ದೆಗೆ ತಿದ್ದುಪಡಿ ತರಲಾಗುವುದಾಗಿ ತಿಳಿಸಿದರು.

ಈ ವೇಳೆ ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವಿಧೇಯಕವನ್ನು ತರಾತುರಿಯಲ್ಲಿ ಸರ್ಕಾರ ಜಾರಿಗೊಳಿಸಿದೆ. ಎಂದು ಆರೋಪಿಸಿದೆ. ಈ ಬಗ್ಗೆ ಆಕ್ರೋಷಿತರಾದ ರೈತರು ಪ್ರತಿಭಟನೆಗೂ ಮುಂದಾಗಿದ್ದಾರೆ.

Exit mobile version