ಇನ್ಮುಂದೆ ಚಾಲನಾ ಪರವಾನಗಿಗೆ ಪರದಾಡಬೇಕಾಗಿಲ್ಲ

SAMSUNG

ನವದೆಹಲಿ, ನ. 09: ಇಲ್ಲಿಯವರೆಗೆ ಜನರು ಚಾಲನಾ ಪರವಾನಗಿ ಪಡೆಯಲು ಕಷ್ಟ ಪಡಬೇಕಾಗಿತ್ತು. ಕಾಗದ ಪತ್ರಗಳನ್ನು ಹಿಡಿದುಕೊಂಡು ತಿಂಗಳುಗಳ ಕಾಲ ಅಲೆದಾಡಬೇಕಾಗಿತ್ತು. ಆದರೆ, ಈಗ ಸಾರ್ವಜನಿಕ ಹಿತಾಸಕ್ತಿ ಖಾತರಿ ಕಾಯ್ದೆಯಡಿಯಾಗುವ ಡಿಎಲ್ ಪ್ರಕ್ರಿಯೆ ಕೇವಲ 7 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಸೇವೆಯನ್ನ ಹಂತ ಹಂತವಾಗಿ ಜಾರಿಗೆ ತರುವ ಕೇಂದ್ರ ಅಲೋಚಿಸಿದ್ದು, ಸದ್ಯ ಈ ಸೌಲಭ್ಯ ಉತ್ತರಪ್ರದೇಶದಲ್ಲಿ ಲಭ್ಯವಾಗಲಿದೆ. 24 ಸೇವೆಗಳನ್ನ ಪೂರ್ಣಗೊಳಿಸಲು ಸಾರಿಗೆ ಇಲಾಖೆಗೆ (ಆರ್‌ಟಿಒ) ಏಳು ದಿನಗಳ ಕಾಲಾವಕಾಶ ನೀಡಲಾಗಿದೆ.

ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಯುಪಿ) ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಸಾರಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಸಾರಿಗೆ ಇಲಾಖೆ ಪ್ರಾರಂಭಿಸಿದ ಆನ್‌ಲೈನ್ ಸೇವೆಗಳನ್ನ ಪರಿಶೀಲಿಸಲಾಯ್ತು. ಅಷ್ಟೇ ಅಲ್ಲ, ವಾಣಿಜ್ಯ ಮತ್ತು ವಾಣಿಜ್ಯೇತರ ವಾಹನಗಳ ನೋಂದಣಿಗೆ ಡಿಜಿಟಲ್ ಸಿಗ್ನೇಚರ್ ಮತ್ತು ಡಾಕ್ಯುಮೆಂಟ್ ಅಪ್‌ಲೋಡ್ ಮಾಡುವ ವ್ಯವಸ್ಥೆಯನ್ನ ಜಾರಿಗೆ ತರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನು ನೋಂದಣಿ ಸಂಖ್ಯೆಯನ್ನ ಪಡೆಯಲು ವಾಹನ ಮಾಲೀಕರು ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ.

ವಾಹನ ನೋಂದಣಿ ಪುಸ್ತಕ, ಪರವಾನಗಿ ಮತ್ತು ಚಾಲನಾ ಪರವಾನಗಿಯ ಆನ್‌ಲೈನ್ ಮುದ್ರಣ ಸುಲಭವಾಗಿದೆ. ಯಾಕಂದ್ರೆ, ಈ ಸೌಲಭ್ಯಗಳನ್ನ ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ parivahan.gov.in ಅಥವಾ uptransport.upsdc.gov.in ನಲ್ಲಿ ಪಡೆಯಬಹುದು. ಮದುವೆಗಾಗಿ ಯಾರಿಗಾದರೂ ಹೊಸ ಪರವಾನಗಿ ಅಥವಾ ವಿಶೇಷ ಪರವಾನಗಿ ಅಗತ್ಯವಿದ್ದರೆ, ನೀವು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು.

Exit mobile version