ಎಲ್.ಟಿ.ಸಿ ನಗದು ವೋಚರ್ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್‌

ನವದೆಹಲಿ : ಕೋವಿಡ್ 19 ಸೋಂಕಿನಿಂದಾಗಿ ಉಂಟಾದ ಆರ್ಥಿಕ ಹೊಡೆತವನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸಣ್ಣ ಉದ್ಯಮಿಗಳಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಮಹಿಳೆಯರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಐದು ಕಂತುಗಳಲ್ಲಿ ಹಲವು ಯೋಜನೆ ಘೋಷಿಸಿದ್ದು, ಮುಂಬರುವ ಹಬ್ಬದ ಸೀಸನ್ ನಿಟ್ಟಿನಲ್ಲಿ ಸರ್ಕಾರಿ ನೌಕರರ ಬೇಡಿಕೆಯನ್ನು ಉತ್ತೇಜಿಸುವ ನೆಲೆಯಲ್ಲಿ ಎಲ್.ಟಿ.ಸಿ ನಗದು ವೋಚರ್ ಯೋಜನೆ ಹಾಗೂ ಹಬ್ಬದ ಮುಂಗಡ ಯೋಜನೆ ಘೋಷಿಸಿದ್ದಾರೆ.

ಇಂದು ಜಿಎಸ್‌ಟಿ ಅಥವಾ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆ ನಡೆಯುವ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಮುಖ ಆರ್ಥಿಕ ವಿಷಯಗಳ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಇದೇ ವೇಳೆ ಮಾತನಾಡಿದ ಅವರು ಕೇಂದ್ರ ಸರ್ಕಾರಿ ನೌಕರರಿಗೆ ₹10,000 ಬಡ್ಡಿ ರಹಿತ ಮುಂಗಡ ನೀಡಲು ಮುಂದಾಗಲಿದೆ ಎಂದು  ಹೇಳಿದರು. ಇದೇ ವೇಳೆ ಅವರು ಮಾತನಾಡಿ, ಉದ್ಯೋಗಿಗಳು ಮುಂಗಡ ಮೌಲ್ಯದ ಪೂರ್ವ-ಲೋಡೆಡ್ ರುಪೇ ಕಾರ್ಡ್ ಅನ್ನು ಪಡೆಯುತ್ತಾರೆ ಹಾಗೂ ಈ ನಿಟ್ಟಿನಲ್ಲಿ ಸರಕಾರ ವು ಬ್ಯಾಂಕ್ ಕ್ರ್ಯೂಸ್ ಗಳನ್ನು ಭರಿಸಲಿದೆ ಅಂತ ಅವರು ತಿಳಿಸಿದರು.

ಇದೇ ವೇಳೆ ಅವರು ಮಾತನಾಡುತ್ತ COVID-19 ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಬಡವರು ಮತ್ತು ದುರ್ಬಲ ವರ್ಗಗಳ ಅಗತ್ಯಗಳನ್ನು ‘ಅತ್ಮ ನಿರ್ಭರ್ ಭಾರತ್’ ಪ್ಯಾಕೇಜ್ ನಲ್ಲಿ ನೀಡಲಾಗಿದೆ. ಪೂರೈಕೆ ಯ ನಿರ್ಬಂಧಗಳು ಸ್ವಲ್ಪ ಮಟ್ಟಿಗೆ ಸಡಿಲಗೊಂಡರೂ, ಗ್ರಾಹಕರ ಬೇಡಿಕೆಇನ್ನೂ ಉತ್ತೇಜನನೀಡಬೇಕಾಗಿದೆ. ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಈಗ, ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಯನ್ನು ಹೆಚ್ಚಿಸುವ ಎರಡು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಮೊದಲನೆಯದು ಎಲ್ ಟಿಸಿ ಕ್ಯಾಶ್ ವೋಚರ್ ಯೋಜನೆ ಮತ್ತು ಎರಡನೆಯದು ವಿಶೇಷ ಉತ್ಸವ ಮುಂಗಡ ಯೋಜನೆ.

ವಿಶೇಷ ಹಬ್ಬ ಮುಂಗಡ ಯೋಜನೆಯಡಿ ಸರ್ಕಾರಿ ನೌಕರರು ಹಬ್ಬದ ಮುಂಗಡವಾಗಿ 10 ಸಾವಿರ ರೂ ಪಡೆದುಕೊಳ್ಳಲಿದ್ದಾರೆಂದು ತಿಳಿಸಿದರು. ಸಂಘಟಿತ ವಲಯದ ಉದ್ಯೋಗಿಗಳು ಹೆಚ್ಚಳವಾಗಿದ್ದು, ಉಳಿತಾಯ ಹೆಚ್ಚಳವಾಗಲಿದೆ. ಈ ಹಿನ್ನೆಲೆಯಲ್ಲಿ ಇಂತಹ ಜನರ ಬೇಡಿಕೆಯನ್ನು ಉತ್ತೇಜಿಸಲು ಸರ್ಕಾರ  ಬದ್ಧವಾಗಿದೆ ಎಂದರು.

Exit mobile version