ಒಂದೆಲಗದ ಔಷಧೀಯ ಗುಣಗಳು:

ಪ್ರಕ್ರತಿ ನಮಗೆ ಅನೇಕ ರೀತಿಯ ಔಷಧೀಯ ಗಿಡಮೂಲಿಕೆಗಳನ್ನು ನೀಡಿದೆ. ಆದರೆ ನಾವು ಇದರ ಬಗ್ಗೆ ತಿಳಿಯಬೇಕಷ್ಟೆ ಇತ್ತೀಚಿನ ದಿನಗಳಲ್ಲಿ ಸಣ್ಣ ಕಾಯಿಲೆ ಬಂದರೂ ಆಸ್ಪತ್ರೆಗಳಿಗೆ ಹೋಗುತ್ತೇವೆ. ಆದರೆ ಅದಕ್ಕೂ ಮೊದಲು ನಾವು ನಮ್ಮ ಪ್ರಕ್ರತಿಯತ್ತ ನೋಡಿದರೆ ನಮಗೆ ಅನೇಕ ಉಪಯುಕ್ತವಾದ ಅನೇಕ ಸಸ್ಯ ಸಂಪತ್ತುಗಳು  ಸಿಗುತ್ತವೆ ನಾವು ನೋಡಬೇಕಷ್ಟೆ. ಒಂದೆಲಗ ಸಸ್ಯದ ಬಗ್ಗೆ ತಿಳಿಯೋಣ.

ಒಂದೆಲಗ ಸೊಫ್ಫು ಹಲವು ರೋಗಗಳಿಗೆ ಔಷಧಿಯಾಗಿದ್ದು, ಒಂದಲ್ಲ ಒಂದು ರೀತಿಯಲ್ಲಿ ಇದು ಮಾನವ ದೇಹಕ್ಕೆ ಉಪಯುಕ್ತವಾಗಿದೆ. ಕೆಮ್ಮು ಉಸಿರಾಟದ ತೊಂದರೆ ಇರುವವರಿಗೆ ಇದರ ರಸವನ್ನು ಜೇನು ತುಪ್ಪದೊಂದಿಗೆ ಸೇವಿಸಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಇದನ್ನು ಪ್ರತಿದಿನ ಆಹಾರದಲ್ಲಿ ಸೇವಿಸುವುದರಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳಿಗೆ ಪ್ರತಿದಿನ ಇದರ ರಸವನ್ನು ಕುಡಿಸುವುದರಿಂದ ಮಕ್ಕಳ ಬುದ್ದಿಶಕ್ತಿ ಚುರುಕಾಗುತ್ತದೆ, ಜ್ಞಾನಶಕ್ತಿಯೂ ಹೆಚ್ಚುತ್ತದೆ. ಇದರ ಎಲೆಯನ್ನು ಹಾಗೇ ಜಗಿದು ತಿನ್ನಲೂ ಮಕ್ಕಳಿಗೆ ಕೊಡಬಹುದು.

ಒಂದೆಲಗದ ಸೊಪ್ಪಿನ ಲ್ಲಿ ತಂಬುಳಿ ಹಾಗೂ ಚಟ್ನಿಯನ್ನು ಮಾಡಿಕೊಂಡು ನಿತ್ಯವೂ ಸೇವಿಸುವುದರಿಂದ  ಮಲಬದ್ದತೆಯನ್ನು ನಿವಾರಣೆ ಮಾಡಬಹುದಾಗಿದೆ. ಮದುಮೇಹಿಗಳು ಇದರ ರಸವನ್ನು ಸೇವಿಸುವುದರಿಂದ ಮಧುಮೇಹವು ನಿಯಂತ್ರಣಕ್ಕೆ ಬರುವುದು.

ಒಂದೆಲಗದ ಸೊಪ್ಪನ್ನು ಗ್ರೈಂಡ್ ಮಾಡಿ ಪೇಸ್ಟನ್ನು ಮಾಡಿಕೊಂಡು ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಳಿಕ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು ಅಲ್ಲದೆ ತಲೆ ಹೊಟ್ಟು ನಿವಾರಣೆಯಾಗುವುದು. ಕೂದಲು ಉದುರುವಿಕೆಯ ಸಮಸ್ಯೆಯಿಂದ ದೂರವಾಗಬಹುದಾಗಿದೆ. ಹೀಗೆ ಅನೇಕ ಸಮಸ್ಯೆಗಳಿಗೆ ಒಂದೆಲಗದಲ್ಲಿ ಪರಿಹಾರವಿದೆ.

Exit mobile version