ಕತ್ತೆಯ ಮೇಲೆ ಎಫ್‌ಐಆರ್ ದಾಖಲಿಸಿದ ಪಾಕ್ ಪೊಲೀಸರು

ಕರಾಚಿಯಲ್ಲಿ ಕತ್ತೆಯನ್ನು ಅರೆಸ್ಟ್ ಮಾಡೋದರ ಮೂಲಕ ಪಾಕ್ ಪೊಲೀಸರು ನಗೆಪಾಟಲಿಗೀಡಾದ ಘಟನೆ ನಡೆದಿದೆ.ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕತ್ತೆ ಟ್ರೋಲ್‌ಗೆ ಗುರಿಯಾಗಿದೆ. ಗ್ಯಾಬ್ಲಿಂಗ್ ಹೆಸರಲಿನಲ್ಲಿ ಕತ್ತೆ ಮೇಲೆ ಎಫ್‌ಐ.ಆರ್ ದಾಖಲಾಗಿದೆ. ಅಂದಹಾಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಸಿಟಿಯಲ್ಲಿ ಕಳೆದ ವಾರಾಂತ್ಯದಲ್ಲಿ ಈ ಘಟನೆ ನಡೆದಿದ್ದು . ಕತ್ತೆ ರೇಸ್ ಕೆಲವೊಬ್ಬರು ಆಯೋಜಿಸುವ ಮೂಲಕ ಜೂಜಾಡುತ್ತಿದ್ದಾರೆ ಎಂಬ ದೂರು ದಾಖಲಾಗಿತ್ತು.. ಮಾಹಿತಿಯನ್ನು ಬೆನ್ನಟ್ಟಿದ ಪೊಲೀಸರು ಜೂಜು ತಡೆ ಕಾಯ್ದೆ ಪ್ರಕಾರ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲು ತೆರಳಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದಾಗ ಕತ್ತೆಯು ಅಲ್ಲಿದ್ದು ಎಫ್‌ಐಆರ್‌ನಲ್ಲಿ ಆರೋಪಿಗಳ ಜೊತೆಗೆ ಕತ್ತೆಯ ಹೆಸರೂ ಉಲ್ಲೇಖವಾಗಿದೆ. ಸದ್ಯ ಕತ್ತೆಯನ್ನು ಠಾಣೆಯ ಹೊರಗೆ ಕಟ್ಟಿಹಾಕಲಾಗಿದೆ ಎಅಂದು ಸ್ಟೇಷನ್ ಹೌಸ್ ಆಫೀಸರ್, ಬಿ ಡಿವಿಷನ್ ರಹೀಂ ಯಾರ್ ಖಾನ್ ತಿಳಿಸಿದ್ದಾರೆ.ಇನ್ನು ದೂರಿನಲ್ಲಿ ಕತ್ತೆಯ ಹೆಸರು ಉಲ್ಲೇಖ ಇದ್ದ ಕಾರಣ ಪೊಲೀಸರು ಎಂಟು ಆರೋಪಿಗಳ ಜತೆಗೆ ಕತ್ತೆಯನ್ನೂ ಬಂಧಿಸಿದ್ದರು. ಜೂಜು ನಡೆಯುತ್ತಿತ್ತು ಎನ್ನಲಾದ ಸ್ಥಳದಿಂದ ೧.೨ ಲಕ್ಷ ಪಾಕಿಸ್ತಾನಿ ರೂಪಾಯಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Exit mobile version