ಕಳೆಗುಂದಿದ ಸಂಕ್ರಾಂತಿ ಹಬ್ಬ: ಕೋವಿಡ್‌ನಿಂದಾಗಿ ರಾಜ್ಯಾದ್ಯಂತ ಸರಳವಾಗಿ ಸಂಕ್ರಾಂತಿ ಸಂಭ್ರಮಾಚರಣೆ

Makar Sankranti

ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬ. ಹಬ್ಬದಂದು  ಸಾಮಾನ್ಯವಾಗಿ ಮನೆಯನ್ನೆಲ್ಲ ಸಿಂಗಾರ ಮಾಡಿ ಎಳ್ಳುಬೆಲ್ಲ ಹಂಚಿ ತುಂಬಾ ಸಂಭ್ರಮವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗೂ ದೇಗುಲಗಳಲ್ಲಿ ವಿಶೇಷವಾಗಿ ಪೂಜೆ ಪುನಸ್ಕಾರಗಳು ಇರುತ್ತವೆ ಹಾಗೂ ಹಬ್ಬದ ದಿನದಂದು ಸಾಮಾನ್ಯವಾಗಿ ಮಾರುಕಟ್ಟೆಗಳು ತುಂಬಾನೇ ನಳನಳಿಸುತ್ತಿರುತ್ತದೆ.

ಆದರೆ ಹೋದ ವರ್ಷದಂತೆ ಈ ವರ್ಷ ಕೂಡ ಕೋವಿಡ್‌ನಿಂದಾಗಿ ,ಹಾಗೂ ರಾಜ್ಯ ಸರ್ಕಾರ ಆದೇಶಿಸಿರುವ ವೀಕೆಂಡ್‌ ಕರ್ಫ್ಯೂ ನಿಂದಾಗಿ ಸಂಕ್ರಾಂತಿ ಹಬ್ಬವನ್ನು ತುಂಬಾ ಸರಳವಾಗಿ ಆಚರಿಸುತ್ತಿದೆ ಹಾಗೂ ದೇಗುಲಗಳಲ್ಲಿ ಸರಳವಾಗಿ ಪೂಜೆ-ಪುನಸ್ಕಾರಗಳು ನೆರವೇರುತ್ತಿದೆ, ಹಾಗೂ ಮಾರುಕಟ್ಟೆಗಳು ಕೂಡ ಹಬ್ಬದ ಸಂಭ್ರಮಾಚರಣೆ ಇಲ್ಲದೆ ಹಾಗೂ ಕಡಿಮೆ ಗ್ರಾಹಕ ರಿಂದಾಗಿ ಬಿಕೋ ಎನ್ನುತ್ತಿದೆ. ಮುಂದಿನ ವರ್ಷವಾದರೂ ಕೋವಿಡ್ ಎನ್ನುವ ಮಹಾಮಾರಿ ದೂರವಾಗಿ ಎಲ್ಲವೂ ಮೊದಲಿನಂತಾಗಲಿ ಎಂದು ಈ ಹಬ್ಬದ ದಿನ ಎಲ್ಲರೂ ಆಶಿಸುತ್ತಿದ್ದೇವೆ.

Exit mobile version