Bangalore : ಪ್ರಜ್ವಲ್ ರೇವಣ್ಣ (Prajwal Revanna ) ಪೆನ್ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ (25thousand pen drive distributed) ಭಾರೀ ತಿರುವುಗಳನ್ನು ತೆಗೆದುಕೊಳ್ಳುತ್ತಿದ್ದು, ಇಡೀ ಪ್ರಕರಣದ
ಹಿಂದೆ ರಾಜ್ಯದ ಪ್ರಭಾವಿ ರಾಜಕೀಯ ನಾಯಕರ (Political leaders) ಕೈವಾಡವಿರುವ ಶಂಕೆ ಮೂಡಿದೆ. ಲೋಕಸಭಾ ಚುನಾವಣೆಯ (Lok Sabha Elections) ಮತದಾನಕ್ಕೆ ಎರಡು ದಿನ ಬಾಕಿ
ಇರುವಾಗ ಪೆನ್ಡ್ರೈವ್ ಪ್ರಕರಣವನ್ನು ಮುನ್ನಲೆಗೆ ತರಲು ಷಡ್ಯಂತ್ರ (Conspiracy) ರೂಪಿಸಲಾಗಿತ್ತು ಎನ್ನಲಾಗಿದೆ.
25 ಸಾವಿರ (25 thousand) ಪೆನ್ಡ್ರೈವ್ (Pen drive) ಹಂಚಿಕೆ : ಪ್ರಜ್ವಲ್ ರೇವಣ್ಣ (Prajwal Revanna) ಪೆನ್ಡ್ರೈವ್ ಪ್ರಕರಣವನ್ನು ಮುಂದಿಟ್ಟುಕೊಂಡು ಮತದಾರರ ಮೇಲೆ ಪ್ರಭಾವ ಬೀರಲು,
ಮತದಾನಕ್ಕೆ ಎರಡು ದಿನ (2 Days) ಮುಂಚಿತವಾಗಿ ಪೆನ್ಡ್ರೈವ್ಗಳನ್ನು ಹಾಸನ ಲೋಕಸಭಾ ವ್ಯಾಪ್ತಿಯಲ್ಲಿ (Hassan is in Lok Sabha jurisdiction) ವ್ಯವಸ್ಥಿತವಾಗಿ ಹಂಚಲಾಗಿದ್ದು. ಸುಮಾರು
25 ಸಾವಿರ ಪೆನ್ಡ್ರೈವ್ಗಳನ್ನು ಸಾರ್ವಜನಿಕರಿಗೆ ಹಂಚಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ (rural areas) ಹಂಚಿದರೆ ಅದನ್ನು ಹೇಗೆ ಬಳಸಬೇಕು ಮತ್ತು ಅದನ್ನು ಬಳಸಲು ಸೂಕ್ತ ತಾಂತ್ರಿಕ ವ್ಯವಸ್ಥೆ ಇರುವುದಿಲ್ಲ
ಎನ್ನುವ ಕಾರಣದಿಂದ ನಗರ ಪ್ರದೇಶದ (25thousand pen drive distributed) ಯುವಕರಿಗೆ ಈ ಪೆನ್ಡ್ರೈವ್ಗಳನ್ನು ಹಂಚಲಾಗಿದೆ.
ಕೋಟಿ ಕೋಟಿ ಡೀಲ್ (Crore deal) : ಪೆನ್ಡ್ರೈವ್ ಪ್ರಕರಣವನ್ನು ಮುಂದಿಟ್ಟುಕೊಂಡು ರೇವಣ್ಣ ಕುಟುಂಬವನ್ನು (Revanna Family) ಬ್ಲ್ಯಾಕ್ಮೇಲ್ ಮಾಡಿ, ಕೋಟಿ ಕೋಟಿ ರೂಪಾಯಿಗಳ ಡೀಲ್
ಕುದುರಿಸುವ ಷಡ್ಯಂತ್ರಗಳು ನಡೆದಿದೆ. ಪೆನ್ಡ್ರೈವ್ನಲ್ಲಿರುವ ಮೂಲ ವಿಡಿಯೋಗಳಿಗೆ ಭಾರೀ ಡಿಮ್ಯಾಂಡ್ ಬಂದ ಕಾರಣ, ಅನೇಕ ಅವುಗಳನ್ನು ಖರೀದಿಸಲು ಕೋಟಿಗಟ್ಟಲೇ ಹಣ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಪ್ರಭಾವಿಗಳೇ ಸೂತ್ರಧಾರರು (Influenced leaders) : ಇಡೀ ಪ್ರಕರಣದ ಹಿಂದೆ ರಾಜ್ಯದ ಪ್ರಭಾವಿ ರಾಜಕೀಯ (Influential politics) ನೇತಾರರಿದ್ದಾರೆ ಎನ್ನಲಾಗಿದೆ. ಪ್ರಕರಣವನ್ನು ವ್ಯವಸ್ಥಿತವಾಗಿ
ರೂಪಿಸಲಾಗಿದ್ದು, ರೇವಣ್ಣ ಕುಟುಂಬವನ್ನು ರಾಜಕೀಯವಾಗಿ ಹಣಿಯಲು ಪೆನ್ಡ್ರೈವ್ ಪ್ರಕರಣವನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗಿದೆ.
ಶಾಸಕ ಯತ್ನಾಳ್ (Yatnal) ಕಿಡಿ : SIT ನಿಷ್ಪಕ್ಷಪಾತವಾಗಿ ವಿಚಾರಣೆ ಮಾಡುತ್ತಿದೆಯೋ ಅಥವಾ “ಸಿಡಿ ವಿತರಕನ “ (“CD Distributor”) ಚೇಲಾ ಕೆಲಸ ಮಾಡುತ್ತಿದೆಯೋ? ನೊಂದ ಮಹಿಳೆಯರಿಗೆ
ನ್ಯಾಯ ದೊರಕಿಸಲು ಈ ವಿಶೇಷ ತನಿಖಾ ತಂಡಕ್ಕೆ ಆಗುವುದಿಲ್ಲ. ನಿಮ್ಮ ಪೊಲೀಸರು ರಾಜಕೀಯ ಪಕ್ಷದ ಪ್ರತಿನಿಧಿಗಳು ಆಗಿದ್ದು ಯಾವಾಗ? ಎಂದು ಬಿಜೆಪಿ (BJP) ಶಾಸಕ ಯತ್ನಾಳ್ ಕಿಡಿಕಾರಿದ್ದಾರೆ.
ಇದನ್ನು ಓದಿ: ಶಿವಮೊಗ್ಗದಲ್ಲಿ ಭರ್ಜರಿ ವೋಟಿಂಗ್ – ಯಾವ ಕ್ಷೇತ್ರಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ..? ಇಲ್ಲಿದೆ ವಿವರ