Vijayapura: ದೇಶದಾದ್ಯಂತ ಸಂಚಲನ ಮೂಡಿಸಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಹೊಸ ಸಿಡಿ ಫ್ಯಾಕ್ಟರಿ ಓಪನ್ ಆಗಲಿದೆ ಎಂದು ಅವರು ಹೇಳಿದ್ದಾರೆ. ಇದು ಯಾರಿಗೆ ಸಂಬಂಧಿಸಿದ್ದು, ಯಾರು ಮಾಡುತ್ತಿದ್ದಾರೆ ಇತ್ಯಾದಿ ಯಾವ ವಿವರವನ್ನೂ ಅವರು ಬಹಿರಂಗಪಡಿಸಿಲ್ಲ ಆದರೆ ಸುತ್ತಿ ಬಳಸಿ ಕಾಂಗ್ರೆಸ್ (Congress) ಪಕ್ಷದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯ (Lok Sabha elections) ಮೂರನೇ ಹಂತದ ಮತದಾನದ ವೇಳೆ ಮತ ಚಲಾಯಿಸಿ ಬಳಿಕ ಮಾತನಾಡಿದ ಅವರು, ಪ್ರಜ್ವಲ್ (Prajwal) ಅಶ್ಲೀಲ ವಿಡಿಯೋ ಬಹಿರಂಗವಾಗಿದ್ದರ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ವಕೀಲ ಹಾಗೂ ಬಿಜೆಪಿ (BJP) ನಾಯಕ ದೇವೇರಾಜೇ ಗೌಡರು (Deveraje Gowda) ಆರೋಪಿಸಿದಂತೆ ಪ್ರಕರಣದಲ್ಲಿ ಡಿಕೆಶಿ (DK ) ಕೈವಾಡ ಇರುವುದು ಸ್ಪಷ್ಟ ರಾಜ್ಯ ಸರ್ಕಾರ (State Govt) ರಚನೆ ಮಾಡಿರುವ ಎಸ್ಐಟಿ (SIT) ಸಂಪೂರ್ಣವಾಗಿ ಡಿಕೆ ಶಿವಕುಮಾರ್ ವಶದಲ್ಲಿದೆ. ಅವರ ಆಣತಿಯಂತೆ ಕೆಲಸ ಮಾಡುತ್ತದೆ ಎಂದು ಯತ್ನಾಳ್ (Yatnal) ದೂರಿದ್ದಾರೆ.
ಇನ್ನು ನಾನು ಯಾವುದನ್ನು ಬಾಯಿ ಚಪಲಕ್ಕೆ ಇಲ್ಲವೇ ಪ್ರಚಾರಕ್ಕೆ ಹೇಳುವುದಿಲ್ಲ. ಹಿಂದೆಯೇ ನಾನು ಸಿ.ಡಿ (CD) ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದೆ. ಆದರೆ ಯಾರದ್ದು ಎಂದು ಹೇಳಿರಲಿಲ್ಲ. ನನ್ನ ಮಾತು ಈಗ ನಿಜವಾಗಿದೆ . ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಸಿಡಿ ಬಿಡುಗಡೆ (CD Releses) ಕಾರ್ಯಕ್ರಮ ನಡೆಯುತ್ತದೆ ನೋಡುತ್ತಿರಿ ಎಂದು ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.14ರಲ್ಲಿ ನಾವು ಸುಮಾರು 13ರನ್ನು ಗೆಲ್ಲುತ್ತೇವೆ. ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಜನರಿಗೆ ಗೊತ್ತಿದೆ ಯಾವ ಪಕ್ಷಕ್ಕೆ ವೋಟ್ ಹಾಕಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.