ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋವಿಡ್ ಎಫೆಕ್ಟ್: ಇಳಿಮುಖವಾಗಿದೆ ಪ್ರಯಾಣಿಕರ ಸಂಖ್ಯೆ

Kempegowda_International_

ಬೆಂಗಳೂರು: ಜ14: ಕೊರೋನಾ ವೈರಸ್‌ ಎಫೆಕ್ಟ್‌ ಹೆಚ್ಚುತ್ತಿದ್ದಂತೆ, ಎಲ್ಲಾ ರಂಗಗಳಲ್ಲೂ ಅದರ ಪರಿಣಾಮ ಗೋಚರವಾಗುತ್ತಿದೆ. ಮುಖ್ಯವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕೊರೋನಾದ ಎಫೆಕ್ಟ್‌ ತುಸು ಹೆಚ್ಚೇ ಆಗಿದೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಈ ಬಾರಿ ಭಾರೀ ಕುಸಿತ ಕಂಡಿದೆ. ಅದ್ರಲ್ಲೂ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿದೆ.

ಸಾಮಾನ್ಯವಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ 72,000-75,000 ಇರುತ್ತಿತ್ತು.. ಇದು ವಿಮಾನ ನಿಲ್ದಾಣದ ವ್ಯವಹಾರದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರೇ ಹೇಳುವಂತೆ, ಒಮಿಕ್ರಾನ್ ವೈರಸ್‌ ಹರಡುವಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಇದು ವಿಮಾನ ನಿಲ್ದಾಣದ ಮೇಲೆ ಗಂಭೀರ ಪರಿಣಾಮ ಬೀರಿದೆ.

Exit mobile version