ಕೊಂಕಣಿ ಸಾಂಗ್ ಮೂಲಕ ಡೇಟಿಂಗ್ ಸೀಕ್ರೇಟ್ ಬಿಚ್ಚಿಟ್ಟ ಯಶ್ ..!

ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಈಗ ನ್ಯಾಷನಲ್ ಸ್ಟಾರ್ ಅನ್ನೋದು ಎಲ್ಲರಿಗೂ ಗೊತ್ತು. ಭಾನುವಾರ ಯಶ್ ಕಾರ್ಯಕ್ರಮವೊಂದರ ಹಿನ್ನಲೆ ಗೋವಾಕ್ಕೆ ತೆರಳಿದ್ದು ; ಫ್ಯಾನ್ಸ್ ಜೊತೆ ಮಾತನಾಡುತ್ತಾ ರಾಕಿಬಾಯ್ ಕೊಂಕಣಿಸಾಂಗ್ ಹಾಡಿದ್ದಾರೆ .. ಇದರ ನಡುವೆ ಮದುವೆ ಮುಂಚೆ ರಾಧಿಕಾರನ್ನು ಗೋವಾದಲ್ಲಿ ಸಿಕ್ರೇಟ್ ಆಗಿ ಮೀಟ್ ಮಾಡ್ತಿದ್ದೆ. ಇಲ್ಲೇ ಜಾಸ್ತಿ ಸಮಯವನ್ನು ಕಳೆಯುತ್ತಿದ್ದೆ ಅಂತ ಯಶ್ ಡೇಟಿಂಗ್ ಬಗ್ಗೆ ಹೇಳಿಕೊಂಡಿದ್ದಾರೆ . ಮೊದಲಿಗೆ ಇಂಗ್ಲೀಷ್‍ನಲ್ಲಿ ಮಾತನಾಡಿದ ಯಶ್ ನಂತರ ಕನ್ನಡಿಗರು ಅಲ್ಲಿ ಸೇರಿರೋದನ್ನು ಗಮನಿಸಿದ್ದಾರೆ

ಮತ್ತೆ ಮಾತು ಮುಂದುವರಿಸಿದ ಯಶ್ ತಮ್ಮ ಹಾಗೂ ರಾಧಿಕಾ ಪಂಡಿತ್ ಡೇಟಿಂ ಬಗ್ಗೆ ವಿವರಿಸಿದ್ದಾರೆ . ಜೊತೆಗೆ ಡೈಲಾಗ್ ಹೇಳಲು ಅಭಿಮಾನಿಗಳು ಒತ್ತಾಯ ಮಾಡಿದಾಗ ಕೊಂಕಣಿ ಹಾಡು ಹಾಡಿ ಗೋವಾ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

Exit mobile version