ಕೊಡಗಿನಲ್ಲಿ ರೆಡ್ ಅಲರ್ಟ್: ಭಾರೀ ಮಳೆಯ ಮುನ್ಸೂಚನೆ:

ಕೊಡಗು:  ಇಂದಿನಿಂದ  ಮತ್ತೆ ಕೊಡಗಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು  ಹವಾಮಾನ ಇಲಾಖೆ ತಿಳಿಸಿದೆ.  ಸೆ. 19 ರಿಂದ 21 ರವರೆಗೆ  ಹೆಚ್ಚು ಮಳೆ  ಆಗುವ ಸಾದ್ಯತೆ ಇದೆ. ಈ ಹಿಂದೆ ಭಾರೀ ಮಳೆಗೆ ತತ್ತರಿಸಿದ ಕೊಡಗಿಗೆ  ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಕಳೆದ 2 – 3 ದಿನಗಳಿಂದ  ಮಡಿಕೇರಿ, ಭಾಗಮಂಡಲ, ನಾಪೋಕ್ಲು, ತಲಕಾವೇರಿ ಹಾಗೂ ಇದರ ಅಕ್ಕ ಪಕ್ಕದ ಊರುಗಳಲ್ಲಿ ಬಿಡದೆ   ಧಾರಾಕಾರ ಮಳೆ ಸುರಿಯುತ್ತಿದೆ . ಸೆ. 19 ರಿಂದ ಇನ್ನೂ ಹೆಚ್ಚಾಗುವ  ಸಾಧ್ಯತೆಯಿದೆ  ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಹಿಂದೆ ಸುರಿದ ಮಳೆಯಿಂದಾಗಿ ಕೊಡಗಿನಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಅವಘಡಗಳು ಸಂಭವಿಸಿದ್ದು, ಹಲವಾರು ಮನೆಗಳು , ಜಾನುವಾರು, ಬೆಳೆ  ನಾಶವಾಗಿದ್ದು ಗುಡ್ಡ ಕುಸಿತದಂತಹ ತೊಂದರೆಗಳು ಉಂಟಾಗಿತ್ತು. ಅಲ್ಲದೆ ಅರ್ಚಕರ ಕುಟುಂಬವು ಸಾವಿನ ದುರಂತಕ್ಕೆ ಬಲಿಯಾಗಿತ್ತು. ಈ ಎಲ್ಲಾ ತೊಂದರೆಗಳನ್ನು ಮನಗಂಡ ಜಿಲ್ಲಾಡಳಿತ ಈ ಭಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರಿಗೆ ಸೂಚನೆ ನೀಡಿದೆ.

Exit mobile version