ಕೊರೊನಾ:ರಾಜ್ಯಕ್ಕೆ ನಿರಾಳ ಫಲಿತಾಂಶ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆತಂಕ ಸ್ವಲ್ಪಮಟ್ಟಿಗೆ ಇಳಿಕೆಯಾದಂತಿದ್ದು, ಸೋಮವಾರ 5018 ಹೊಸ ಪ್ರಕರಣಗಳು ದಾಖಲಾದರೆ. 8005 ಮಂದಿ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,70,604 ಆಗಿದ್ದು, ಈವರೆಗೂ 6,53,829 ಮಂದಿ ಗುಣಮುಖರಾಗಿದ್ದಾರೆ.

ಹೀಗಾಗಿ ಸದ್ಯ ರಾಜ್ಯದಲ್ಲಿ 1,06,214 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲೂ ಇಳಿಕೆಯಾಗಿದ್ದು, ಇಂದು ಮೃತಪಟ್ಟ 64 ಮಂದಿ ಸೇರಿದಂತೆ ಒಟ್ಟು 10,542 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

Exit mobile version