ನವದೆಹಲಿ, ಅ. 16: ಕೊರೊನಾ ಸೋಂಕಿನ ಪ್ರಮಾಣ ಸತತವಾಗಿ ಇಳಿಕೆಯಾಗುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 73,70,469 ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 63,371 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 63,371 ಸೋಂಕು ಪ್ರಕರಣಗಳು ವರದಿಯಾಗಿದ್ದು, 845 ಮಂದಿ ಬಲಿಯಾಗಿದ್ದು, ದೇಶದಲ್ಲಿ ಇದೀಗ 73,70,469 ಒಟ್ಟಾರೆ ಸೋಂಕು ಪ್ರಕರಣಗಳಿವೆ. ಸಾವಿನ ಸಂಖ್ಯೆ 1,12,161ಕ್ಕೆ ಏರಿಕೆ ಕಂಡಿದೆ. 8,04,528 ಸಕ್ರಿಯ ಪ್ರಕರಣಗಳಿದ್ದು, 64,53,780 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿಯನ್ನು ನೀಡಿದೆ.