ಕೊರೋನಾ ವಾಸಿಯಾದ ತಕ್ಷಣ ಬೇರೆ ರೋಗ ಎಂಟ್ರಿಯಾಗಲು ಕಾರಣ ಏನ್ ಗೊತ್ತಾ ?

ಕೊರೋನಾ ಅನ್ನೋ ಮಹಾಮಾರಿ ಮನುಷ್ಯನ ದೇಹಕ್ಕೆ ಎಂಟ್ರಿಯಾಗಿ ವಾಸಿಯಾಗೋದಲ್ಲದೆ ಖಾಯಿಲೆ ಗುಣಮುಖವಾದ ಬಳಿಕವೂ ಜನರು ಬೇರೆ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪುತ್ತಿರೋದು ವರದಿಯಾಗಿದೆ. ಕೊರೋನಾದಿಂದ ಗುಣಮುಖರಾದವರು ಮೂರ್ನಾಲ್ಕು ವಾರಗಳ ಬಳಿಕ ಹಲವಾರು ತೊಂದರೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ .

ಇದಕ್ಕೆ ಕಾರಣ ಕೊರೋನಾ ವೈರಸ್ ಕೇವಲ ಶ್ವಾಸಕೋಶದ ಮೇಲೆ ಮಾತ್ರವಲ್ಲದೆ ಹೃದಯ, ಮೆದುಳು ಸೇರಿದಂತೆ ಹಲವು ಭಾಗಗಳಿಗೆ ತೊಂದರೆ ಮಾಡುತ್ತದೆ . ಇದರಿಂದಾಗಿ ಹಲವು ಜನರು ಕೊರೋನಾ ಸೋಂಕು ಗುಣವಾದ ಬಳಿಕವೂ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ .

ಅಂದಹಾಗೆ ಇಟಲಿಯಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದ ಶೇ ೮೪.೭ ರಷ್ಟು ಮಂದಿ ಎರಡು ತಿಂಗಳ ಬಳಿಕ ಆಯಾಸ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಅನ್ನೋ ಹೇಳಿಕೆಯನ್ನು ವೈದ್ಯರೊಬ್ಬರು ಕೊಟ್ಟಿದ್ದಾರೆ .
ಈ ದೀರ್ಘ ಮತ್ತು ಅಲ್ಪಾವಧಿಯ ಪರಿಣಾಮಗಳನ್ನು ಪೋಸ್ಟ್ ಕೋವಿಡ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ .

ಈ ಖಾಯಿಲೆಯಿಂದ ಹೊರಬರಲು ನಿತ್ಯ ಆಕ್ಸಿಜನ್ ಶುದ್ಧತೆ ಇರುವಂತೆ ನೋಡಿಕೊಳ್ಳಬೇಕು. ಜೊತೆಗೆ ಉಸಿರಾಟದ ತೊಂದರೆ , ಗಂಟಲಲ್ಲಿ ತೊಂದರೆ ಬರದಂತೆ ನೋಡಿಕೊಳ್ಳಬೇಕು . ನಿತ್ಯ ದೇಹದ ಉಷ್ಣಾಂಶವನ್ನು ಪರೀಕ್ಷಿಸಬೇಕು .

Exit mobile version