ಕೊವಿಡ್‌: ರಾಜ್ಯದಲ್ಲಿ ಸೋಂಕಿತ ಪ್ರಕರಣಗಳಲ್ಲಿ ಏರಿಕೆ

ಬೆಂಗಳೂರು, ಅಕ್ಟೋಬರ್.15: ಕಳೆದ 24 ಗಂಟೆಗಳಲ್ಲೇ 9265 ಮಂದಿಗೆ ಕೊವಿಡ್-19 ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಅಂದರೆ ರಾಜ್ಯದಲ್ಲಿ ಒಟ್ಟು ಕೋವಿಡ್‌ ಸೋಂಕಿತ ಪ್ರಕರಣಗಳ ಸಂಖ್ಯೆಯು 735371ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 75 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 10198ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಕೊರೊನಾವೈರಸ್ ಒಟ್ಟು 735371 ಸೋಂಕಿತ ಪ್ರಕರಣಗಳ ಪೈಕಿ 611167 ಸೋಂಕಿತರು ಗುಣಮುಖರಾಗಿದ್ದಾರೆ. 113987 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 8662 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾವೈರಸ್ ಕೇಸ್?:

ಬಾಗಲಕೋಟೆ 158, ಬಳ್ಳಾರಿ 275, ಬೆಳಗಾವಿ 297, ಬೆಂಗಳೂರು ಗ್ರಾಮಾಂತರ 344, ಬೆಂಗಳೂರು 4574, ಬೀದರ್ 19, ಚಾಮರಾಜನಗರ 97, ಚಿಕ್ಕಬಳ್ಳಾಪುರ 137, ಚಿಕ್ಕಮಗಳೂರು 97, ಚಿತ್ರದುರ್ಗ 162, ದಕ್ಷಿಣ ಕನ್ನಡ 292, ದಾವಣಗೆರೆ 82, ಧಾರವಾಡ 136, ಗದಗ 41, ಹಾಸನ 227, ಹಾವೇರಿ 66, ಕಲಬುರಗಿ 39, ಕೊಡಗು 160, ಕೋಲಾರ 93, ಕೊಪ್ಪಳ 60, ಮಂಡ್ಯ 212, ಮೈಸೂರು 614, ರಾಯಚೂರು 44, ರಾಮನಗರ 42, ಶಿವಮೊಗ್ಗ 83, ತುಮಕೂರು 341, ಉಡುಪಿ 119, ಉತ್ತರ ಕನ್ನಡ 192, ವಿಜಯಪುರ 128, ಯಾದಗಿರಿ 27 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಒಟ್ಟು 9265 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

Exit mobile version