ವಾಷಿಂಗ್ಟನ್, ಅ.14: ವಿಶ್ವಾದಾದ್ಯಂತ ಕೋವಿಡ್ ಅಬ್ಬರ ದಿನೇ ದಿಣೇ ಹೆಚ್ಚಾಗುತ್ತಿದ್ದು, ಈವರೆಗೆ 3 ಕೋಟಿ 780 ಲಕ್ಷ ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸಾವಿನ ಸಂಖ್ಯೆ 10,84,888 ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಒಟ್ಟು ಸೋಂಕಿತರ ಪೈಕಿ 2,63,88,633 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 84,23,619 ಸಕ್ರಿಯ ಪ್ರಕರಣಗಳಿವೆ. ಅತಿಹೆಚ್ಚು ಚೇತರಿಕೆ ಪ್ರಮಾಣದಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಈವರೆಗೂ 62,27,295 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಉಲ್ಲೇಖವಾಗಿದೆ.