ಸಿಯೋಲ್ ಅ. 13: ದಿನಕ್ಕೊಂದರಂತೆ ಚಿತ್ರ-ವಿಚಿತ್ರ ಕಾನೂನುಗಳನ್ನು ರೂಪಿಸುತ್ತಾ, ಸತ್ತೇ ಹೋದ ಎಂದಾಗಲೆಲ್ಲ ಮತ್ತೆ ಎದ್ದು ಬರುವ ವಿಚಿತ್ರ ದೊರೆ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜನತೆಯ ಎದುರು ಅತ್ತುಬಿಟ್ಟಿದ್ದಾರೆ ಎಂದು ಮಾಹಿತಿ ಮೂಲಗಳು ತಿಳಿಸಿವೆ. ಇದು ವಿಚಿತ್ರ ಆದರೂ ನಿಜ.
ತಮ್ಮ ಪಕ್ಷ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ 75ನೇ ಸಂಸ್ಥಾಪನಾ ದಿನದಲ್ಲಿ ಉತ್ತರ ಕೊರಿಯಾದ ಜನರ ಮುಂದೆ ಕಾಣಿಸಿಕೊಂಡು ಮಾತನಾಡಿದ ಅವರು, ಕಿಮ್ ಜಾಂಗ್ ಉನ್ ದೇಶದ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಜತೆಗೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಜತೆ ಇರಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಉತ್ತರ ಕೊರಿಯಾದಲ್ಲಿ ಕರೊನಾ ಯಾವ ಪ್ರಮಾಣದಲ್ಲಿ ಇದೆ ಎನ್ನುವುದು ಮಾತ್ರ ಇದುವರೆಗೆ ಬಹಿರಂಗಗೊಂಡಿಲ್ಲ. ಕೊರಿಯಾ ಕರೊನಾ ಮುಕ್ತವಾಗಿದೆ ಎಂದು ಕಿಮ್ ಹೇಳಿದ್ದರೂ, ಅವರ ಈ ಭಾಷಣ ಹಲವಾರು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿರುವುದಂತೂ ನಿಜ.