ಕ್ಷಯ ರೋಗಿಗಳಿಗೆ ಕರೋನಾ ಕಂಟಕ ಹೆಚ್ಚು

Viral infection concept. Floating virus.

ಕಳೆದ ಐದಾರು ತಿಂಗಳಿಂದ ವಿಶ್ವದ ಬಹುತೇಕ ದೇಶಗಳು ಕರೋನಾ ವೈರೆಸ್ ಸಾಂಕ್ರಾಮಿಕ ರೋಗದಿಂದಾಗಿ ಸಂಕಷ್ಟದಲ್ಲಿವೆ. ಎಲ್ಲ ಆಸ್ಪತ್ರೆಗಳು ಬಹುತೇಕ ರೋಗಿಗಳಿಂದ ತುಂಬಿವೆ. ಕೋವಿಡ್-19 ವೈರೆಸ್ ರೋಗದ ಸಮಸ್ಯೆಯಿಂದಾಗಿ ಬೇರೆ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಪರದಾಡುವ ಸ್ಥಿತಿ ಬಂದಿದೆ.

ಕರೋನಾ ವೈರೆಸ್‍ನಿಂದ ಪ್ರತಿದಿನ ಎಲ್ಲೆಡೆ ಜನರು ಸಾಯುತ್ತಿದ್ದಾರೆ. ಈ ನಡುವೆ ಯುರೋಪಿಯನ್ ರೆಸ್ಪರೆಟರಿ ಜರ್ನಲ್‍ವೊಂದು ಆತಂಕಕಾರಿ ವರದಿಯನ್ನು ನೀಡಿದೆ. ಯುರೋಪ್‍ನ ರೆಸ್ಪರೆಟರಿ ಜರ್ನಲ್ ಭಾರತ,ಚೀನಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಸಂಬಂಧಪಟ್ಟಂತೆ ಒಂದು ಅಧ್ಯಯನ ಮಾಡಿ ಅಧ್ಯಯನದ ವರದಿಯಲ್ಲಿ ಈ ಮೂರು ದೇಶಗಳಿಗೂ ಮುಂದೆ ಇನ್ನಷ್ಟು ಸಂಕಷ್ಟಗಳು ಎದುರಾಗಲಿವೆ ಎಂದು ತಿಳಿಸಿದೆ. ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರೊಪಿಕಲ್ ಮೆಡಿಸಿನ್ ಮ್ತು ಲಾಂಕೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಕರೋನಾ ವೈರೆಸ್ ಸಾಂಕ್ರಾಮಿಕ ರೋಗದಿಂದಾಗಿ 95 ಸಾವಿರ ಕ್ಷಯ ರೋಗಿಗಳು ಸಾಯುತ್ತಾರೆ ಎಂದು ವರದಿಯಲ್ಲಿ ತಿಳಿಸಿದೆ.

ಕೋವಿಡ್-19 ವೈರೆಸ್‍ನಿಂದಾಗಿ ಬೇರೆ ರೋಗಿಗಗಳಿಗೆ ಚಿಕಿತ್ಸೆ ನೀಡುವುದು ತಡವಾಗುತ್ತಿದೆ. ಕ್ಷಯ ರೋಗವು ಶ್ವಾಸಕೋಶ ಸಂಬಂಧಿ ರೋಗವಾಗಿರುವುದರಿಂದ ಕರೋನಾ ವೈರೆಸ್ ಈ ರೋಗಿಗಳಿಗೆ ಶೀಘ್ರವಾಗಿ ಪರಿಣಾಮ ಬೀರುತ್ತದೆ ಇದರಿಂದ ಕ್ಷಯ ರೋಗಿಗಳಿಗೆ ಕರೋನ ವೈರೆಸ್ ಸೇರಿಕೊಂಡರೆ ಈ ರೋಗಿಗಳನ್ನು ಉಳಿಸಿಕೊಳ್ಳುವುದು ಬಹಳ ಕಷ್ಟವಾಗಿದೆ ಎಂದು ತಿಳಿಸಿದೆ. ಕೋವಿಡ್-19 ನಿಂದಾಗಿ ಹೆಚ್ಚಿನ ಗಮನ ಈ ವೈರಸ್ ಸಂಬಂಧದ ರೋಗಗಳಿಗೆ ನೀಡುವುದರಿಂದ ಕ್ಷಯ ರೋಗಿಗಗಳಿಗೆ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ ಇದರಿಂದಾಗಿ ಸಾವು ಹೆಚ್ಚಾಗುವ ಸಾಧ್ಯತೆ ಇದೆ. ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಉಂಟಾದ ಕೂಡಲೆ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಇನ್ನು ವೈರೆಸ್ ಲಕ್ಷಣಗಳಿರುವ ರೋಗಿಗಳು, ಜತೆಗೆ ವೈರೆಸ್ ಪಾಸಿಟಿವ್ ಇರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವುದರಿಂದ ಆಸ್ಪತ್ರೆಗಳಲ್ಲಿನ ಬಹುತೇಕ ಬೆಡ್‍ಗಳು, ಐಸಿಯುಗಳು, ಆಕ್ಸಿಜನ್‍ಗಳು ಕರೋನಾ ವೈರೆಸ್ ರೋಗಿಗಳಿಂದ ತಯಂಬಿವೆ. ಇದರಿಂದ ಕ್ಷಯ ರೋಗಿಗಳಿಗೆ ಚಿಕಿತ್ಸೆ ಮತ್ತು ಕ್ಷಯ ರೋಗವನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಇದರಿಂದ ಕರೋನಾ ಕ್ಷಯ ರೋಗಿಗಳಿಗೆ ಹೆಚ್ಚಿನ ಸಮಸ್ಯಯನ್ನು ಉಂಟುಮಾಡುತ್ತದೆ ಮಿತಿಮೀರಿದರೆ ಕ್ಷಯ ರೋಗಿಗಳಿಗೆ ಸಾವು ಸಂಭವಿಸುತ್ತದೆ ಎಂದು ಜರ್ನಲ್ ವರದಿಯಲ್ಲಿ ತಿಳಿಸಿದೆ.

ಕರೋನಾ ವೈರೆಸ್‍ನಿಂದಾಗಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಆದರೆ ಕೆಲವು ಕಾರಣಗಳಿಂದ ಚಿಕಿತ್ಸೆ ತಡವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಒಟ್ಟು 1,10,000 ಜನರು ಕ್ಷಯ ರೋಗಿದಿಂದ ಸಾಯುವ ಸಾಧ್ಯತೆ ಇದೆ. ಸದ್ಯಕ್ಕೆ ಕೋವಿಡ್-19ನಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರುವ ಹಿನ್ನೆಲೆ ಮುಂದೆ 2,00,000 ರಷ್ಟು ಸಾವಿನ ಸಂಖ್ಯೆ ಹೆಚ್ಚಾಗಬಹುದು. ಭಾರತದಲ್ಲಿ ಅಷ್ಟೇ ಅಲ್ಲ ಚೀನಾ, ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಕ್ಷಯ ರೋಗ ಸಂಬಂಧಿ ರೋಗಿಗಳಿಗೆ ಹೆಚ್ಚಿನ ಅಪಾಯ ಎದುರಾಗಲಿದೆ. ಜತೆಗ ಶೇ.40 ರಷ್ಟು ರೋಗಿಗಳು ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಲ್ಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

Exit mobile version