ಖೋಟಾನೋಟು ತಯಾರಕ ಆರೋಪಿಗಳ ಬಂಧನ: 2 ಕೋಟಿ ನಕಲಿ ನೋಟು ವಶಕ್ಕೆ

ಬೆಂಗಳೂರು, ಡಿ. 27: ಖೋಟಾನೋಟು ತಯಾರಿಸುತ್ತಿದ್ದ ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಪಾದರಾಯನಪುರ ನಿವಾಸಿ ಗುಂಡು ಇಮ್ರಾನ್ ಹಾಗೂ ಮುಬಾರ್ ಬಂಧಿತ ಆರೋಪಿಗಳಾಗಿದ್ದು, ಬಂಧಿತನಿಂದ ನಕಲಿ ನೋಟು ತಯಾರು ಮಾಡುವ ಯಂತ್ರ ಮತ್ತು ನಕಲಿ ನೋಟು ವಶಪಡಿಸಿಕೊಳ್ಳಲಾಗಿದೆ. ಸುಮಾರು ಎರಡು ಕೋಟಿ ರೂ. ಬೆಲೆ ಬಾಳುವ ನಕಲಿ ನೋಟು ವಶಕ್ಕೆ ಪಡೆಯಲಾಗಿದೆ. 2000 ಮತ್ತು 200 ರೂ. ನ ಪಿಂಕ್ ನಕಲಿ ನೋಟುಗಳನ್ನು ಆರೋಪಿ ತಯಾರಿಸುತ್ತಿದ್ದ. ಬೆಂಗಳೂರಿನಲ್ಲಿ ನಾಲ್ಕು ಕಡೆ ನೋಟು ತಯಾರು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪಾದರಾಯನಪುರದ ಅರಾಫತ್ ನಗರದಲ್ಲಿನಲ್ಲಿ ಘಟಕದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಖೋಟಾನೋಟು ದಂಧೆ ಬಗ್ಗೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ.

ಬಿಲ್ ಪೇಪರ್ ಮೂಲಕ ಪ್ರಿಂಟರ್ ಬಳಸಿ ನೋಟ್ ತಯಾರಿಸಲಾಗುತ್ತುತ್ತು. ಅರಾಫತ್ ನಗರದ ಮನೆಯಲ್ಲಿ ಪ್ರಿಂಟರ್ ಬಳಸಿ ನೂರು ರೂ. ಮುಖ ಬೆಲೆಯ ನಕಲಿ ನೋಟ್ ತಯಾರಿಕೆಯಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಅರಾಫತ್ ನಗರದ ದಾಳಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಮುಂದುವರೆಸಿದ್ದಾರೆ. ವಿಲ್ಸನ್ ಗಾರ್ಡನ್ ಇನ್ಸ್ ಪೆಕ್ಟರ್ ಶಂಕರಾಚಾರಿ ನೃತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸದ್ಯ 20 ಶೀಟ್ ಖೋಟಾ ನೋಟುಗಳು ಪತ್ತೆಯಾಗಿವೆ. ಒಂದು ಶೀಟ್ ನಲ್ಲಿ ಎರಡು ಹಾಗೂ ಮೂರು ಖೋಟಾ ನೋಟುಗಳಿವೆ. ಒಟ್ಟಾರೆ ಪತ್ತೆಯಾದ ನೋಟುಗಳನ್ನು ಪೊಲೀಸರು ಲೆಕ್ಕ ಹಾಕುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಖೋಟಾ ನೋಟು ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಜಮಾಲ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಜಮಾಲ್ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಆಟೋ ಶುಲ್ಕ 100 ರೂ. ಮುಖ ಬೆಲೆಯ ಖೋಟಾ ನೋಟನ್ನು ಜಮಾಲ್ ನೀಡಿದ್ದ. ಅನುಮಾನಗೊಂಡ ಆಟೋ ಚಾಲಕ ಠಾಣೆಗೆ ಕರೆತಂದಿದ್ದ. ಪರಿಶೀಲನೆ ವೇಳೆ ಖೋಟಾ ನೋಟು ಎಂಬುದು ಪತ್ತೆಯಾಗಿತ್ತು. ವಿಲ್ಸನ್ ಗಾರ್ಡನ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Exit mobile version