ಚೀನಾದ ವುಹಾನ್ ನಗರದಲ್ಲಿ ಭೀಕರ ಪ್ರವಾಹ ಎದುರಾಗಿದ್ದು, ಇದರ ಪರಿಣಾಮ ಇಲ್ಲಿನ ನಿವಾಸಿಗಳು ಕಳೆದೊಂದು ವಾರದಿಂದ ಗೃಹಬಂಧನದಲ್ಲಿ ಇರುವಂತಾಗಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಮಹಾಮಾರಿ ಕೊರೊನಾ ವೈರಸ್ನಿಂದಾಗಿ ವುಹಾನ್ ನಗರ ಲಾಕ್ಡೌನ್ ಆಗಿದ್ದರಿಂದಾಗಿ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸಿದ್ದರು. ಆದರೆ ಇದೀಗ ವುಹಾನ್ ನಗರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಇಲ್ಲಿನ ಜನರು ಕಳೆದೊಂದು ವಾರದಿಂದ ಮನೆಯೊಳಗೆ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ವುಹಾನ್ ನಗರ ಕೊರೊನಾ ವೈರಸ್ನ ಎಪಿಕ್ ಸೆಂಟರ್ ಆಗಿದ್ದು, ಸದ್ಯ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಕೊರೊನಾ ವೈರಸ್ನಿಂದ ಪಾರಾಗಲು ಬಳಸುಲಾಗುವ ಪಿಪಿಇ ಸಲಕರೆಣೆಗಳ ವಿತರಣೆ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಪ್ರವಾಹದಿಂದಾಗಿ ವುಹಾನ್ ನಗರದ ಯಾಂಗ್ತೆಜ್ ನದಿಯ ನೀರಿನ ಮಟ್ಟದಲ್ಲಿ ದಾಖಲೆಯ ಏರಿಕೆ ಕಂಡಿದೆ.