ಚೀನಾ – ಭಾರತ ಯುದ್ಧ ವಾತಾವರಣ ನಿರ್ಮಾಣ

ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪ್ರೇರಿತ ಉಗ್ರರು ತಂಟೆ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಚೀನಾ ಸೈನಿಕರು ಭಾರತೀಯ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಲ್ಲೇ ಗಡಿ ನುಸುಳಲು ಯತ್ನಿಸಿದ್ದಾರೆ.

ಮಂಗಳವಾರ ಮುಂಜಾನೆ ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಸೇನೆಯಿಂದ ಸರಣಿ ಪ್ರಚೋದನಾಕಾರಿ ದಾಳಿ ನಡೆಸಿದ್ದು, ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಗುಂಡಿನ ಚಕಮಕಿ ಶುರುವಾಗಿದೆ.

ಲಡಾಖ್ ನ ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿರುವ ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿದ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಚೀನಾ ಆರೋಪಿಸಿತ್ತು. ಇದೀಗ 1975ರ ಬಳಿಕ ಮೊದಲ ವಾರ್ನಿಂಗ್ ಶಾಟ್‌ ಅಥವಾ ಗುಂಡಿನ ಚಕಮಕಿ ಇದಾಗಿದೆ.

ಪೂರ್ವ ಲಡಾಖ್‍ನಲ್ಲಿ ಅತ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್. ಈ ಬಿಕ್ಕಟ್ಟನ್ನು ತಿಳಿಗೊಳಿಸಲು ಉಭಯ ದೇಶಗಳ ಕಮಾಂಡರ್​ಗಳು ಮಾತುಕತೆ ಮುಂದುವರೆಸಲಿರುವುದಾಗಿ ಹೇಳಿದ್ದಾರೆ. 1996ರ ಒಪ್ಪಂದದ ಪ್ರಕಾರ ಗಡಿ ರೇಖೆಯ 2 ಕಿಲೋ ಮೀಟರ್ ಸುತ್ತಳತೆಯಲ್ಲಿ ಗುಂಡಿನ ದಾಳಿಯಾಗಲಿ, ಸ್ಫೋಟ ನಡೆಸುವಂತಿಲ್ಲ. ಹೀಗಾಗಿ ಭಾರತ, ಚೀನಾ ಯೋಧರು ಶಸ್ತ್ರಾಸ್ತ್ರ ಬಳಸದೇ ಮಲ್ಲಯುದ್ಧದ ತಂತ್ರಗಾರಿಕೆ ಬಳಸುತ್ತಾರೆ

Exit mobile version