ಚುನಾವಣೆಯಲ್ಲಿ ಪರಾಜಿತನಾದ ಟ್ರಂಪ್‌ಗೆ ಮತ್ತೊಂದು ಶಾಕ್

ವಾಷಿಂಗ್ಟನ್, .9: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಜಿತನಾದ ಡೊನಾಲ್ಡ್ ಟ್ರಂಪ್ ಇದೀಗ ಪತ್ನಿಯಿಂದ ಬೇರೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿ ಬರತೊಡಗಿವೆ.

ಡೊನಾಲ್ಡ್ ಟ್ರಂಪ್ ಹಾಗು ಮೆಲಾನಿಯಾ ಟ್ರಂಪ್ ತಮ್ಮ 15 ವರ್ಷಗಳ ಟ್ರಾನ್ಸಾಕ್ಷನಲ್ ವಿವಾಹವನ್ನು ಅಂತ್ಯಗೊಳಿಸುವ ನಿರ್ಧರದಲ್ಲಿದ್ದಾರೆ ಎಂದು ವರದಿಯಾಗಿದೆ. ಡೊನಾಲ್ಡ್ ಟ್ರಂಪ್ ಶ್ವೇತ ಭವನದಿಂದ ನಿರ್ಗಮಿಸುತ್ತಿದ್ದಂತೆಯೇ ಟ್ರಂಪ್ ಪತ್ನಿ ವಿಚ್ಛೇದನ ನೀಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಶ್ವೇತ ಭವನದ ಮೂಲಗಳು ಮಾಹಿತಿ ನೀಡಿವೆ.

ಟ್ರಂಪ್ ಹಾಗು ಮೆಲಾನಿಯಾ ಟ್ರಂಪ್ ಇಬ್ಬರ 15 ವರ್ಷಗಳ ಟ್ರಾನ್ಸಾಕ್ಷನಲ್ ಮದುವೆ ಅಂತ್ಯಗೊಳ್ಳಲಿದೆ. ಶ್ವೇತ ಭವನದಲ್ಲಿರುವಷ್ಟು ದಿನ ಮಾತ್ರವೇ ಟ್ರಂಪ್-ಮೆಲಾನಿಯಾ ಜೊತೆಯಲ್ಲಿರಲಿದ್ದು, ಟ್ರಂಪ್ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಪತ್ನಿ ವಿಚ್ಛೇದನ ನೀಡಲಿದ್ದಾರೆ ಎಂದು ಒಮರೋಸಾ ಮನಿಗಾಲ್ಟ್ ನ್ಯೂಮನ್ ಡೈಲಿ ಮೇಲ್ ಗೆ ಮಾಹಿತಿ ನೀಡಿದ್ದಾರೆ. ಟ್ರಂಪ್ ಅಧಿಕಾರದಲ್ಲಿರುವಾಗ ವಿಚ್ಛೇದನ ನೀಡಿದರೆ ತಮ್ಮನ್ನು ಶಿಕ್ಷಿಸುವ ಮಾರ್ಗಗಳು ಇರುತ್ತವೆ ಹೀಗಾಗಿ ಟ್ರಂಪ್ ಅಧಿಕಾರಾವಧಿ ಅಂತ್ಯವಾದ ಬಳಿಕ ಆಕೆ ವಿಚ್ಛೇದನ ನೀಡಲು ಚಿಂತನೆ ನಡೆಸಿದ್ದಾರೆ. ವಿವಾಹದ ಬಳಿಕ ಡೊನಾಲ್ಡ್ ಟ್ರಂಪ್ ಜೊತೆ ಮೆಲಾನಿಯಾ ಒಪ್ಪಂದ ಮಾಡಿಕೊಂಡಿದ್ದು, ಮಗನಿಗೆ ಆತನ ಪಾಲನ್ನು ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು. ಅಷ್ಟೇ ಅಲ್ಲದೇ ಶ್ವೇತ ಭವನದಲ್ಲಿಯೂ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ಪ್ರತ್ಯೇಕ ಕೋಠಡಿಗಳಲ್ಲೇ ಇರುತ್ತಿದ್ದರು ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ

Exit mobile version