ಟ್ರಂಪ್ ದಂಪತಿಗೆ ಕೊರೋನಾ ಪಾಸಿಟಿವ್

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಗೆ ಕೊರೋನಾ ಸೋಂಕು ತಗಲಿರುವುದು ದಢಪಟ್ಟಿದೆ.

ಈ ಬಗ್ಗೆ ಮಾಹಿತಿಯನ್ನು ಸ್ವತ: ಟ್ರಂಪ್ ಅವರೇ ಟ್ವೇಟ್ ಮಾಡಿ ತಿಳಿಸಿದ್ದಾರೆ. ಇಬ್ಬರಿಗೂ ಕೊರೋನಾ ತಗಲಿದ್ದು ಇಬ್ಬರೂ ಒಟ್ಟಿಗೆ ರೋಗವನ್ನು ಎದುರಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ.  ಶುಕ್ರವಾರ ಸೋಂಕು ಪತ್ತೆಯಾಗಿದೆ. ಟ್ರಂಪ್ ಹಾಗೂ  ಮನಾಲಿಯಾ ಅವರ ಆಪ್ತರಿಗೆ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಟ್ರಂಪ್ ದಂಪತಿ ಕೊರೋನಾ ಟೆಸ್ಟ್ ಮಾಡಿಸಿದ್ದು, ಅವರಿಗೆ ಕೊರೋನಾ ಪಾಸಿಟಿವ್ ಎಂದು ಗೊತ್ತಾಗಿದೆ.

ಟ್ರಂಪ್ ಆಪ್ತರು ಹಲವಾರು ದಿನಗಳಿಂದ  ಚುನಾವಣಾ ಪ್ರಚಾರಕ್ಕಾಗಿ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದರು. ಟ್ರಂಪ್ ದಂಪತಿ ಕೂಡಾ ಹಲವಾರು ಕಡೆಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಪ್ರಯಾಣಿಸಿದ್ದರು. ಶ್ವೇತ ಭವನದಲ್ಲೂ ಹಲವು ಮಂದಿಗೆ ಸೋಂಕು ದೃಢಪಟ್ಟಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಮೊದಲು ಕೊರೋನಾ ಲಸಿಕೆ ಸಿಗುವುದೆಂದು ಟ್ರಂಪ್ ಹೇಳಿದ್ದರು . ಆದರೆ ಇದೀಗ ಚುನಾವಣೆ ಒಳಗೆ ಮಾಡೆರ್ನಾ ಕೊರೋನಾ ಲಸಿಕೆ ಸಿಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ನವೆಂಬರ್ 25ರೊಳಗೆ ಮಾಡೆರ್ನಾ ಲಸಿಕೆಯನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು” ಯು ಎಸ್ ಬಯೋಟಿಕ್ ಫರ್ಮ್ ಮಾಡೆರ್ನಾ” ಸ್ಪಷ್ಟಪಡಿಸಿದೆ.

Exit mobile version