ಡ್ರೋಣ್ ಮೂಲಕ ರಾಸಾಯನಿಕ ಸಿಂಪಡಿಸುವ ಕಾರ್ಯಕ್ಕೆ ಚಾಲನೆ

(Photo: Pixabay)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಉಲ್ಬಣಿಸಿರುವ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದರಂತೆ ಡ್ರೋಣ್ ಮೂಲಕ ರಾಸಾಯನಿಕ ಸಿಂಪಡಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ..

ಸುಗರ್ಧನ, ದಕ್ಷಾ ಸಂಘ ಜಂಟಿ ಸಹಭಾಗಿತ್ವದಲ್ಲಿ ಡ್ರೋಣ್ ಬಳಸಿ ರಾಸಾಯನಿಕ ಸಿಂಪಡಿಕೆಗೆ ಸರ್ಕಾರ ಮುಂದಾಗಿದ್ದು, ಬೆಂಗಳೂರು ದಕ್ಷಿಣ ವಲಯದಲ್ಲಿ ಮೊದಲು ರಾಸಾಯನಿಕ ಸಿಂಪಡಣೆಗೆ ಸಂಘವೂ ಅನುಮತಿ ಪಡೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಇಂದಿನಿಂದ ಡ್ರೋಣ್ ಮೂಲಕ ಬೆಂಗಳೂರು ದಕ್ಷಿಣ ವಲಯದಲ್ಲಿ ರಾಸಾಯನಿಕ ಸಿಂಪಡಿಸಲಾಗುತ್ತಿದೆ. 50 ಮೀಟರ್ ಎತ್ತರಕ್ಕೆ ಡ್ರೋಣ್ ಹಾರಿಸಿ, ಪ್ರತಿ ರಸ್ತೆಯಲ್ಲೂ ರಾಸಾಯನಿಕ ಸಿಂಪಡಿಸಲಾಗುತ್ತಿದ್ದು, ಒಂದು ಡ್ರೋಣ್‌ನಲ್ಲಿ 16 ಲೀಟರ್ ರಾಸಾಯನಿಕ ದ್ರವ ತುಂಬಿಸಿ ಸಿಂಪಡಿಸಲಾಗುವುದು. ಒಂದು ಬಾರಿ ಡ್ರೋಣ್ ಹಾರಿಸಿದರೆ 15 ನಿಮಿಷದವರೆಗೂ ಹಾರಾಟ ನಡೆಸಲಿದ್ದು, ಈ 15 ನಿಮಿಷದಲ್ಲಿ ಒಂದೂವರೆ ಎಕರೆಯಷ್ಟು ಪ್ರದೇಶಕ್ಕೆ ರಾಸಾಯನಿಕ ಸಿಂಪಡಿಸಬಹುದು. ಬೆಂಗಳೂರು ದಕ್ಷಿಣ ವಲಯದ ಪ್ರತಿ ವಾರ್ಡ್‌ಗೂ ಡ್ರೋಣ್ ಮೂಲಕ‍ ರಾಸಾಯನಿಕ ಸಿಂಪಡಿಸಲಿದ್ದು, ರಾಸಾಯನಿಕ ಸಿಂಪಡಿಸುವ ಕಾರ್ಯಕ್ಕೆ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ರವಿಸುಬ್ರಮಣ್ಯ ಹಾಗೂ ಉಸಯ್ ಗರುಡಾಚಾರ್‌ಚಾಲನೆ ನೀಡಿದರು.

Exit mobile version