ತಲೆ ಕೂದಲಿನ ಸಮಸ್ಯೆಗೆ ಪರಿಹಾರ:

ಕೂದಲು ಉದುರುವುದಕ್ಕೆ ಹಲವಾರು ಕಾರಣಗಳಿರುತ್ತವೆ, ಅತಿಯಾಗಿ ನಿದ್ದೆಗೆಡುವುದರಿಂದ, ಬಾಡಿ ಹೀಟಾಗುವುದರಿಂದ, ತಲೆಗೆ ಹೆಲ್ಮೆಟ್ ಧರಿಸುವುದರಿಂದ ಹೀಟಾಗಿ, ಥೈರಾಯಿಡ್ ಸಮಸ್ಯೆಯಿಂದ, ವಿಟಮಿನ್ ಬಿ  ಕೊರತೆಯಿಂದ ಹೀಗೆ ಹತ್ತು ಹಲವಾರು ಕಾರಣಗಳಿಂದ ಕೂದಲು ಉದುರುತ್ತವೆ. ಕೂದಲು ಉದುರುವುದಕ್ಕೆ ಈ ಕಾರಣಗಳಾದರೆ, ಇನ್ನು ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿ ಆಗುವುದೂ ಇತ್ತೀಚೆಗೆ ಬಹಳ ಜನರಲ್ಲಿ ಕಾಣುವಂತಹ ಸಮಸ್ಯೆಯಾಗಿದೆ.

ಈ ಸಮಸ್ಯೆಗಳಿಗೆ ಕೆಲವೊಂದು ಪರಿಹಾರ ಇಲ್ಲಿದೆ. ನಮ್ಮ ದೇಹದೊಳಗೆ ನ್ಯೂಟ್ರೀಷನ್  ಫುಡ್ ತೆಗೆದುಕೊಳ್ಳಬೇಕು  ಹಾಗೂ ಹೆಸರುಕಾಳನ್ನು ನೆನೆಸಿಟ್ಟುಕೊಂಡು ಅದಕ್ಕೆ ಹಾಲನ್ನು ಮಿಕ್ಸ್ ಮಾಡಿ ಜ್ಯೂಸ್ ಮಾಡಿ ಕುಡಿಯುವುದರಿಂದ ವಿಟಮಿನ್ ಬಿ ಇದರಲ್ಲಿರುವುದರಿಂದ ಇದು ಕೂದಲಿಗೆ ಒಳ್ಳೆಯದು.

 ಇನ್ನು ಕೆಲವೊಂದು ಎಣ್ಣೆಯನ್ನು ಮನೆಯಲ್ಲೇ ತಯಾರಿಸಬಹುದು. ಅದರಲ್ಲಿ ಕೂದಲು ಬಿಳಿಯಾಗುವುದನ್ನು ತಪ್ಪಿಸಲು, ಮತ್ತು ಉದುರುವುದನ್ನು ತಪ್ಪಿಸಲು ಎರಡು ಕಾರಣಕ್ಕೂ ಆಗುವಂತಹ ಒಂದು ಎಣ್ಣೆಯನ್ನು ತಯಾರಿಸುವ ವಿಧಾನವನ್ನು ತಿಳಿಸುತ್ತೇನೆ. ಇದನ್ನು ತಯಾರಿಸುವ ವಿಧಾನ ಹೀಗಿದೆ ನೋಡಿ. ನಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯನ್ನು

ತೆಗೆದುಕೊಳ್ಳಬೇಕು ಅದರ ಕಾಲು ಭಾಗದಷ್ಟು ಹರಳೆಣ್ಣೆಯನ್ನು ಮಿಕ್ಸ್ ಮಾಡಿಕೊಂಡು, ಕುದಿಯಲು ಇಟ್ಟು, ಅದಕ್ಕೆ ಗ್ರಂಥಿಕೆ ಅಂಗಡಿಯಲ್ಲಿ ಸಿಗುವ ಲಾವಂಚದ ಬೇರನ್ನು, ಸ್ವಲ್ಪ ಕರಿಬೇವಿನ ಎಲೆಯನ್ನು, ಸ್ವಲ್ಪ  ಮೆಂಥೆ ಕಾಳನ್ನು  ಇನ್ನು  ಐದಾರು ವೀಳ್ಯದ ಎಲೆಗಳನ್ನೂ  ಸಣ್ಣಗೆ ಕಟ್ ಮಾಡಿ ಹಾಕಿ ಚೆನ್ನಾಗಿ ಕುದಿಸಿ.

ನಂತರ ಕುದಿದ  ಮೇಲೆ ಅದನ್ನು ಆರಿಸಿ ಒಂದು ಬಾಟಲಿಯಲ್ಲಿ ತುಂಬಿಸಿಟ್ಟುಕೊಂಡರೆ  ಈ ಎಣ್ಣೆಯನ್ನು ವಾರದಲ್ಲಿ 3 ಬಾರಿ ಹಚ್ಚಿಕೊಂಡು ಕನಿಷ್ಠ  ಒಂದೆರಡು ಗಂಟೆಯಾದರೂ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಉದುರುವುದಕ್ಕೂ ಬಿಳಿ ಕೂದಲು ಕಪ್ಪಾಗುವುದಕ್ಕೂ ಉತ್ತಮ ಪರಿಹಾರವನ್ನು ಕಾಣಬಹುದು.

Exit mobile version