ದಲ್ಲಾಳಿಗಳು, ಮಧ್ಯವರ್ತಿಗಳಿಂದ ಕೃಷಿ ಮಸೂದೆ ವಿರೋಧ: ಪ್ರಧಾನಿ ಮೋದಿ ಟೀಕೆ

ಹೊಸದಿಲ್ಲಿ: ದಲ್ಲಾಳಿಗಳು, ಮಧ್ಯವರ್ತಿಗಳ ಬೆಂಬಲದಿಂದಲೇ ರಾಜಕಾರಣ ಮಾಡುತ್ತಿರುವವರು ಈ ಕೃಷಿ ಮಸೂದೆಗಳ ವಿಚಾರವಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.

ʻಸ್ವಾಮಿತ್ವʼ ಯೋಜನೆಯಡಿ ಆಸ್ತಿ ಹಕ್ಕು ಕಾರ್ಡ್‌ಗಳ ವಿತರಣೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಹೆಚ್ಚಿನ ಜನರಿಗೆ ಬಡವರು, ಕೃಷಿಕರು, ಕಾರ್ಮಿಕರು ಆತ್ಮನಿರ್ಭರರಾಗುವುದು ಬೇಕಾಗಿಲ್ಲ. ನಮ್ಮ ಸರ್ಕಾರ ಅವರನ್ನು ಸಬಲೀಕರಣಗೊಳಿಸಲು ಮುಂದಾಗಿದೆ. ಈ ಕ್ರಮಗಳು ಕೆಲವರ ಆದಾಯದ ಮೂಲಕ್ಕೆ ಹೊಡೆತ ನೀಡಿದೆ ಎಂದರು.

ಕಳೆದ ಆರು ವರ್ಷಗಳಲ್ಲಿ ತಮ್ಮ ಸರ್ಕಾರ ಗ್ರಾಮಗಳು, ಗ್ರಾಮೀಣ ಜನರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ದೇಶ ಸುಧಾರಣಾ ಕ್ರಮಗಳಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.

Exit mobile version