ದೇಶದಲ್ಲಿ 5 ಲಕ್ಷ ದಾಟಿದ ಕೊರೋನಾ

ಕೊರೋನಾ ವೈರಸ್ ಎಲ್ಲೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.  ಅದು ಎಷ್ಟೇ ಲಾಕ್ಡೌನ್ ಮಾಡಿದ್ರೂ  ಮುನ್ನೆಚ್ಚರಿಕಾ ಕ್ರಮ  ವಹಿಸಿದ್ರೂ  ಸಹ ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತಲೇ ಇದೆ. ಕೋವಿಡ್ ನಿಂದ ಜನ ಭಯದಲ್ಲೇ ಬದುಕುತ್ತಿದ್ದಾರೆ. ಇದರಿಂದ ಕುಸಿದ ಆರ್ಥಿಕ ಪರಿಸ್ಥಿತಿಯು ಸರ್ಕಾರಕ್ಕೆ ತಲೆನೋವಾಗಿದೆ. ಆದರೆ ಶುಕ್ರವಾರ ಒಂದೇ ದಿನ ಭಾರತದಲ್ಲಿ 18,552ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿ ಈವರೆಗೂ 508953 ಮಂದಿಗೆ ಕೊರೋನಾ ಕಾಣಿಸಿಕೊಂಡಿದೆ. ಇದರಿಂದ ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದೆ. ಇನ್ನು ಶುಕ್ರವಾರ ಒಂದೇ ದಿನ  384 ಮಂದಿ ಬಲಿಯಾಗಿ ಒಟ್ಟು ಕೊರೋನಾದಿಂದ ಮೃತಪಟ್ಟವರ ಸಂಖ್ಯೆ  15,685ಕ್ಕೆ ಏರಿಕೆಯಾಗಿದೆ.

                 ಇನ್ನು ರಾಜ್ಯದಲ್ಲಿ ಕೂಡ ಕೊರೋನಾದ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ.  ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ 123 ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಜೂನ್ 6 ರಂದು ಅಂದರೆ  24 ದಿನಗಳ ಹಿಂದೆ ಕೇವಲ 5 ಮಂದಿ ಕೊರೋನಾ ಸೋಂಕಿತರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದರು. 22 ಬಿ ಎಮ್ ಟಿ ಸಿ ಕಾರ್ಯಕರ್ತರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 11,005 ಮಂದಿಯಲ್ಲಿ ಕೊವಿಡ್ ಪತ್ತೆಯಾಗಿದ್ದು 180 ಮಂದಿ ಕೊರೋನಾದಿಂದ ಬಲಿಯಾಗಿದ್ದಾರೆ. ಬೆಂಗಳೂರಿನ ಹಲವು ಏರಿಯಾಗಳನ್ನು ಸೀಲ್ಡೌನ್ ಮಾಡಿದ್ದು ಇನ್ನು ರಾಜ್ಯದಲ್ಲಿ ನೋ ಲಾಕ್ಡೌನ್ ಎಂದು ಸರ್ಕಾರ ಘೋಷಿಸಿದೆ.

Exit mobile version